ಪರಿಪೂರ್ಣತೆಯ ತರುವಾಯ

1042

ಪ್ರತಿಕ್ಷಣವೂ ಅನಂತದಲ್ಲಿ ಲೀನವಾಗುವ 
ಪುನರಾವರ್ತಿಸಲಾಗದ ಮಾತಗಳನ್ನು ಅತೀ ಎಚ್ಚರದ 
ಸ್ಥಿತಿಯಲ್ಲೆ ಕೇಳಬೇಕಿದೆ ಆಗ ಏಕಾಗ್ರತೆ ಒಟ್ಟುಗೂಡುವುದನ್ನು 
ನೀವು ಕಾಣುತ್ತೀರಿ ಗ್ರಹಿಕೆ ವೃದ್ಧಿಸುವುದ ಗ್ರಹಿಸುತ್ತೀರಿ

ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಆಚಾರ್ಯ
ವಾಚಸ್ಪತಿಗೆ ಕಾಲ ನೆಗೆದುದೇ ತಿಳಿಯದು 
ಇಹದ ಪರಿವೆ ಉಂಟಾದರೆ ಕಣ್ಣೆದುರು ಮಂದ ಬೆಳಕಿನ ದೀಪ
ಎಣ್ಣೆ ತೀರಿಹೋಗುತ್ತಿರುವ ಅದು ಮತ್ತು ಸೌಂದರ್ಯ ಕಳೆದುಹೋಗುತ್ತಿರುವ ಭಾಮತಿ

ಶಿಲ್ಪ ಕಡೆಯುವಾಗಿನ ಜೀವಂತಿಕೆಯ ಅನುಭವ
ಪರಿಪೂರ್ಣತೆಯಾದ ತರುವಾಯದಲ್ಲಿ ಉಳಿಯುವುದೇ ಇಲ್ಲ
ಬದುಕು ಕಣಿವೆಯ ಹಾಗೆ ಅನ್ನಿಸತ್ತಲೇ ಹೋಗುತ್ತದೆ
ಪದೇ ಪದೇ ಸಾವು ಕಣ್ಮುಂದೆ ಬಂದು ಹೋದಂತೆ ಮುದ್ದಾಮು ತಂದುಕೊಳ್ಳುತ್ತೇವೆ ಶೂನ್ಯಮನಸ್ಕತೆ ಆವರಿಸಿ

ಕುರುಡರಾಗಿ ಜೀವಿಸಿದವರಿಗೆ 
ಸೌಂದರ್ಯ ಏನೆಂದು ಕೇಳಿ ನೋಡಿ ಹುಡುಕುತ್ತಾರೆ ಅವರು 
ಅದೇ ಹುಟ್ಟುಕುರುಡರಾದರೆ ನೇರ ಕತ್ತಲು ಅನ್ನುತ್ತಾರೆ
ಅವರು ಜೀವಂತ ಸಂವೇದನೆ ಹೊಂದಿದ್ದಾರಾದ್ದರಿಂದ ಇದು ಸಾಧ್ಯ ತಡೆಗೋಡೆಗಳಿಲ್ಲದಿದ್ದರೆ ನಿರ್ವಾಣ ಕಾಣುತ್ತೇವೆ ಕೂಡಾ
ಬೆಳಕೆಂದೊಡನೆ ಹಲವು ಆಯಾಮಗಳು ಸಿಕ್ಕು ದಾರಿ ತಪ್ಪಿಸುತ್ತವೆ
ಕತ್ತಲೆಂದೊಡನೆ ಒಂದೇ ದಾರಿ ತೆರೆದುಕೊಳ್ಳುತ್ತದೆ ನೇರ

ಯುವ ಕವಿ ಕೃಷ್ಣ ದೇವಾಂಗಮಠ

TAG


Leave a Reply

Your email address will not be published. Required fields are marked *

error: Content is protected !!