12-1=23 ರಹಸ್ಯ ಬಿಚ್ಚಿಟ್ಟ ಡಾಲಿ ಟೀಂ

261

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೋಷಿಯಲ್ ಮೀಡಿಯಾದಲ್ಲಿ 12-1-23 ಏನ್ ಇರ್ಬೋದು ಎಂದು ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದ್ದ ನಟ ಡಾಲಿ ಧನಂಜಯ್, ಅದರ ರಹಸ್ಯ ಬಿಚ್ಚಿಟ್ಟಿದ್ದಾರೆ. ಇದು ತುಂಬಾ ಕ್ರಿಯಾತ್ಮಕ ಶೈಲಿಯಲ್ಲಿ ಹೊಸ ಸಿನಿಮಾದ ಡೇಟ್ ಅನೌನ್ಸ್ ಮಾಡಿದ್ದಾರೆ.

ಯೆಸ್, ಕೆಆರ್ ಜಿ ಸ್ಟುಡಿಯೋ ಹಾಗೂ ಡಾಲಿ ಪಿಚ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಆರ್ಕೆಸ್ಟ್ರಾ ಮೈಸೂರು ಚಿತ್ರ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಜನವರಿ 12, 2023ರಂದು ಆರ್ಕೆಸ್ಟ್ರಾ ಮೈಸೂರು ಚಿತ್ರ ರಿಲೀಸ್ ಆಗುತ್ತಿದೆ.

ಪೂರ್ಣಚಂದ್ರ ಮೈಸೂರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗಾಯಕ ರಘು ದಿಕ್ಷೀತ್ ಅವರ ಕಮಾಲ್ ಇಲ್ಲಿಯೂ ಇದೆ. ಡಾಲಿ ಧನಂಜಯ್ ಹಾಡುಗಳನ್ನು ಸಹ ಬರೆದು ಸೈ ಎನಿಸಿಕೊಂಡಿದ್ದಾರೆ. ಸುನೀಲ್ ಮೈಸೂರು ಆಕ್ಷನ್ ಕಟ್ ಹೇಳಿದ್ದಾರೆ. ಅಶ್ವಿನಿ ವಿಜಯಕುಮಾರ್ ಹಾಗೂ ರಘು ದಿಕ್ಷೀತ್ ನಿರ್ಮಾಣ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!