2 ಸಾವಿರ ನೋಟು ಹಿಂದಕ್ಕೆ: ಸಿದ್ದರಾಮಯ್ಯ ಕಿಡಿ

235

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2016ರಲ್ಲಿ ರಾತ್ರೋರಾತ್ರಿ ಸಾವಿರ ರೂಪಾಯಿ, 500 ರೂಪಾಯಿ ನೋಟು ಬ್ಯಾನ್ ಮಾಡಿ ಸಾಮಾನ್ಯ ಜನರ ಜೀವನದ ಜೊತೆಗೆ ಚೆಲ್ಲಾಟವಾಡಿದ್ದ ಕೇಂದ್ರದ ಮೋದಿ ಸರ್ಕಾರ, ಇದೀಗ 2 ಸಾವಿರ ರೂಪಾಯಿ ನೋಟು ಹಿಂದಕ್ಕೆ ಪಡೆದಿದೆ. ಇದರ ವಿರುದ್ಧ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ಬಿಜೆಪಿಗೆ ತನ್ನ ಯೋಜನೆಗಳ ಬಗ್ಗೆಯೇ ಸರಿಯಾದ ಸ್ಪಷ್ಟತೆಯಿಲ್ಲ. 2 ಸಾವಿರ ರೂಪಾಯಿ ನೋಟು ಬ್ಯಾನ್ ಮಾಡವುದಾಗಿದ್ದರೆ 2016ರಲ್ಲಿ ಯಾಕೆ ಪರಿಚಯ ಮಾಡಿದೀರಿ? ಇದು ತನ್ನ ವೈಫಲ್ಯದಿಂದ ಜನರನ್ನು ಬೇರೆ ಕಡೆ ಸೆಳೆಯುವ ತಂತ್ರ ಎಂದು ಟ್ವೀಟ್ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

2 ಸಾವಿರ ರೂಪಾಯಿ ನೋಟು ಇದ್ದವರು ಬ್ಯಾಂಕಿಗೆ ಹೋಗಿ ಬದಲಾಯಿಸಿಕೊಳ್ಳಬಹುದು. ಇದಕ್ಕಾಗಿ 4 ತಿಂಗಳು 10 ದಿನ ಸಮಯವಿದೆ. ಸೆಪ್ಟೆಂಬರ್ ತಿಂಗಳವರೆಗೂ ನೋಟು ಬದಲಾಯಿಸಿಕೊಳ್ಳಬಹುದು. ಹೀಗಾಗಿ ಜನರು ಆತಂಕಕ್ಕೆ ಒಳಗಾಗದೆ ನೋಟು ಬದಲಾಯಿಸಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!