ಪಾಯಸ ಸೇವಿಸಿ 23 ಮಂದಿ ಅಸ್ವಸ್ಥ

370

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಮದುವೆ ಮನೆಯಲ್ಲಿ ಶಾವಿಗೆ ಪಾಯಸ ಸೇವಿಸಿ 23 ಮಂದಿ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಗಳೂರಿನ ಗೊಂಡನಹಳ್ಳಿಯಲ್ಲಿ ಮದುವೆ ಮನೆಯಲ್ಲಿ ಪಾಯಸ ನೀಡಲಾಗಿದೆ. ಇದನ್ನು ಸೇವಿಸಿದ 23 ಜನರಲ್ಲಿ ಸುಸ್ತು, ವಾಂತಿ ಬೇಧಿ ಕಾಣಿಸಿಕೊಂಡಿದೆ. ಫುಡ್ ಪಾಯಿಸನ್ ನಿಂದಾಗಿ ಈ ರೀತಿಯಾಗಿರಬಹುದು ಎನ್ನಲಾಗುತ್ತಿದೆ. ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಆಹಾರ ಸೇವಿಸಿ ಜನರು ಅಸ್ವಸ್ಥಗೊಳ್ಳುತ್ತಿರುವ ಮೂರನೇ ಪ್ರಕರಣವಾಗಿದೆ.




Leave a Reply

Your email address will not be published. Required fields are marked *

error: Content is protected !!