24 ಶಾಸಕರಿಗೆ ಸಿಗುತ್ತಾ ಸಚಿವ ಸ್ಥಾನ?

93

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾಗಿ 8 ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೂ ಇನ್ನು ಖಾತೆ ಹಂಚಿಕೆ ಮಾಡಿಲ್ಲ. ಇನ್ನು ಅನೇಕ ಹಿರಿಯ ಶಾಸಕರು ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಕಸರತ್ತು ನಡೆಸಿದ್ದಾರೆ. ಕೆಲ ಮೂಲಗಳ ಪ್ರಕಾರ 24 ಶಾಸಕರಿ ಸಚಿವ ಸ್ಥಾನ ಸಿಗುತ್ತಿದೆಯಂತೆ.

ಶನಿವಾರವೇ ನೂತನ ಸಚಿವ ಪ್ರಮಾಣ ವಚನ ಸಮಾರಂಭ ನಡೆಯಲಿದೆಯಂತೆ. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸಹ ಸೂಚಿಸಿದ್ದಾರಂತೆ. ಆದರೆ, ಸಚಿವರಾಗುತ್ತಿರುವ ಆ 24 ಶಾಸಕರು ಯಾರು ಅನ್ನೋ ಕುತೂಹಲ ಮೂಡಿದೆ. ಕಾಂಗ್ರೆಸ್ ನಾಯಕರ ಸಭೆ ಮುಗಿದ ನಂತರ ಸಚಿವರ ಪಟ್ಟಿ ಅಂತಿಮಗೊಳಿಸಿ ಬಿಡುಗಡೆಯಾಗಲಿದೆಯಂತೆ.




Leave a Reply

Your email address will not be published. Required fields are marked *

error: Content is protected !!