ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಮೊಹಮ್ಮದ್ ಮಸೀದಿ ಟೆಕ್ಕೆ ಹತ್ತಿರ ನಡೆದಿದೆ. ಅಶೋಕ ರಾಮು ಕಾರಜೋಳ, ಭಾಸಾಬ ಕರ್ಜಗಿ, ಜಾವೀದ್ ಹದೀಲ ಜಾಲಗೇರಿ ಮೃತರು ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 4 ಕುರಿಗಳು ಸಹ ಸಾವನ್ನಪ್ಪಿವೆ. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
