ಬಾಲಕಿ ರಕ್ಷಿಸಲು ಹೋಗಿ ಬಾವಿಗೆ ಬಿದ್ದ 40 ಜನರು: 4 ಜನರು ಸಾವು

324

ಪ್ರಜಾಸ್ತ್ರ ಸುದ್ದಿ

ವಿದಿಶಾ: ಬಾವಿಗೆ ಬಿದ್ದ ಬಾಲಕಿಯನ್ನ ರಕ್ಷಿಸಲು ಹೋದಾಗ ಮಣ್ಣು ಕುಸಿದ ಪರಿಣಾಮ, 40 ಜನರು ಬಾವಿಗೆ ಬಿದ್ದಿದ್ದಾರೆ. ಇದ್ರಿಂದಾಗಿ 4 ಜನರು ಸಾವನ್ನಪ್ಪಿದ್ದಾರೆ. 23 ಮಂದಿಯನ್ನ ರಕ್ಷಿಸಲಾಗಿದೆ. ಉಳಿದವರ ರಕ್ಷಣೆಯ ಕಾರ್ಯಾಚರಣೆ ನಡೆದಿದೆ.

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಿಂದ 50 ಕಿಲೋ ಮೀಟರ್ ದೂರದಲ್ಲಿರುವ ಗಂಜ್ ಬಸೋದಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ, ಗಾಯಗೊಂಡಿರುವವರಿಗೆ 50 ಸಾವಿರ ರೂಪಾಯಿ ನೀಡಲಾಗುವುದು ಎಂದು ಸಿಎಂ ಶಿವರಾಜ ಸಿಂಗ್ ಚೌಹಾಣ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!