ಸಿಎಂ ಪರ 65 ಶಾಸಕರ ಸಹಿ ಸಂಗ್ರಹ ಜಟಾಪಟಿ

252

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ರಿಂದ, ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಇದೀಗ ಸಿಎಂ ಪರವಾಗಿ 65 ಜನ ಶಾಸಕರು ಸಹಿ ಮಾಡಿದ್ದಾರೆ ಎಂದು ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳುತ್ತಿದ್ದಾರೆ.

ಆದ್ರೆ, ಇದನ್ನ ಧಾರವಾಡ ಶಾಸಕ ಅರವಿಂದ ಬೆಲ್ಲದ ಅಲ್ಲಗಳೆದಿದ್ದು, ಈ ಹಿಂದೆ ಗ್ರಾಮೀಣಾಭಿವೃದ್ಧಿ ಅನುದಾನಕ್ಕಾಗಿ ಮಾಡಿದ ಸಹಿ. ಅದನ್ನೇ ಏನಾದ್ರೂ ಅದಕ್ಕೆ ಹಚ್ಚಿದ್ದಾರೋ ಏನೋ ಗೊತ್ತಿಲ್ಲ ಎನ್ನುವ ಮೂಲಕ ಬಿಎಸ್ವೈ ತಾವು ಇಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ದಾರೆ. ಅಲ್ದೇ, ಸಚಿವ ಆರ್.ಅಶೋಕ ಸಹಿ ಸಂಗ್ರಹ ಮಾಡಬಾರದಾಗಿತ್ತು. ಪರ ಹಾಗೂ ವಿರೋಧವೂ ಬೇಡವಾಗಿತ್ತು ಎಂದಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ನಾನೇ ಮುಂದಿನ ಸಿಎಂ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸಿಎಂ ರೇಸಿನಲ್ಲಿದ್ದಾರೆ. ಅವರು ದೊಡ್ಡವರು ಅವರ ಸಣ್ಣವನಾಗಿ ನಾನು ಮಾತ್ನಾಡುವುದು ಅಪರಾಧವಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಆರ್.ಅಶೋಕ ಹೇಳಿಕೆ ಬಗ್ಗೆ ಕೇಳಿದ್ರೆ, ನಾವು ಯಾವುದೇ ಸಚಿವರ ಸಹಿ ಪಡೆದಿಲ್ಲ. ಇದು ನನ್ನೊಬ್ಬನ ನಿರ್ಧಾರವಲ್ಲ, ಶಾಸಕರೆಲ್ಲ ಸೇರಿ ಮಾಡಿರುವ ಸಹಿ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!