96 ವರ್ಷದ ಅಜ್ಜಿಗೆ ಪರೀಕ್ಷೆಯಲ್ಲಿ 98 ಅಂಕ!

932

ತಿರುವನಂತಪುರಂನಲ್ಲಿ 96 ವರ್ಷದ ಕಾರ್ತಿಯಾಣಿ ಅಮ್ಮ ಎಂಬ ಹೆಸರಿನ ಅಜ್ಜಿ, ಸಾಕ್ಷರತಾ ಪರೀಕ್ಷೆಯಲ್ಲಿ 98 ಅಂಕ ಪಡೆಯುವ ಮೂಲಕ ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆದಿದ್ದಾಳೆ.

ಅಜ್ಜಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇರಳ ಸರ್ಕಾರ, ಆಕೆಗೆ ಲ್ಯಾಪ್‍ಟಾಪ್ ಉಡುಗೊರೆಯಾಗಿ ನೀಡಿದೆ.
ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕಾರ್ತಿಯಾಣಿ ಅವರು ಕಂಪ್ಯೂಟರ್ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಕೇರಳ ರಾಜ್ಯ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಕಾರ್ತಿಯಾಣಿ, ಅಜ್ಜಿಯ ಮನೆಗೆ ಭೇಟಿ ನೀಡಿ, ಲ್ಯಾಪ್‍ಟಾಪ್ ವಿತರಿಸಿದ್ದಾರೆ.

ಕಾರ್ತಿಯಾಣಿ ಅವರ ಜೊತೆಗೆ ಕುಳಿತು ಕೆಲಹೊತ್ತು ಖುದ್ದಾಗಿ ಸಚಿವರೇ ಲ್ಯಾಪ್‍ಟಾಪ್ ಬಳಕೆ ಮಾಡುವ ಕುರಿತು ಅಜ್ಜಿಗೆ ತರಬೇತಿ ನೀಡಿದರು.

ಸಾಕ್ಷರತಾ ಪರೀಕ್ಷೆ ಬಗ್ಗೆ:

ಅನಕ್ಷರತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ಕೇರಳ ರಾಜ್ಯದಲ್ಲಿ ಶೇ 100 ರಷ್ಟು ಸಾಕ್ಷರತೆಯನ್ನು ಸಾಧಿಸುವ ‘ಸಾಕ್ಷರತಾ ಮಿಷನ್’ ರೂಪಿಸಲಾಗಿದೆ.

ವೃದ್ಧರಿಗೆ, ಕಲಿಕೆ ವಂಚಿತರಿಗೆ ಓದುವಿಕೆ, ಬರಹ ಮತ್ತು ಗಣಿತ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ಬಳಿ 100 ಅಂಕದ `ಅಕ್ಷರಲಕ್ಷಂ’ ಸಾಕ್ಷರತಾ ಪರೀಕ್ಷೆ ನಡೆಸಿ, ಪ್ರಮಾಣಪತ್ರ ನೀಡಲಾಗುತ್ತದೆ.

ಬುಡಕಟ್ಟು ಜನಾಂಗ, ಮೀನುಗಾರರು ಮತ್ತು ಸ್ಲಂ-ನಿವಾಸಿಗಳಂತಹ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯಕ್ರಮದ ಅಡಿ ಹಾಕಲಾಗಿದೆ.

ಈ ವರ್ಷ 42,933 ಜನರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಕಾರ್ಯಕ್ರಮ ಮೂಲಕ ರಾಜ್ಯ ಶೇ 100ರಷ್ಟು ಸಾಕ್ಷರತೆ ಸಾಧಿಸುವ ಸನಿಹದಲ್ಲಿದೆ.




Leave a Reply

Your email address will not be published. Required fields are marked *

error: Content is protected !!