ಸರಣಿ ಅಪಘಾತದಲ್ಲಿ 48 ವಾಹನಗಳು ಜಖಂ

186

ಪ್ರಜಾಸ್ತ್ರ ಸುದ್ದಿ

ಪುಣೆ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಲೆ ಸೇತುವೆ ಹತ್ತಿರ ಭೀಕರ ಅಪಘಾತ ಸಂಭವಿಸಿದೆ. ಬರೋಬ್ಬರಿ 48 ವಾಹನಗಳು ಘಟನೆಯಲ್ಲಿ ಜಖಂಗೊಂಡಿವೆ. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹೆಚ್ಚಿನ ಅನಾಹುತದ ಬಗ್ಗೆ ಇನ್ನು ತಿಳಿದು ಬಂದಿಲ್ಲ.

ಪೊಲೀಸ್ ಮೂಲಗಳ ಪ್ರಕಾರ ಟ್ರಕ್ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!