ಮುಂದೆ ನನಗೆ ಯಾರೂ ಹೆಣ್ಣು ಕೊಡಲ್ಲ: ನಟ ಅಭಿಷೇಕ್

178

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಜೂನಿಯರ್ ರೆಬಲ್ ಸ್ಟಾರ್ ನಟ ಅಭಿಷೇಕ್ ನಿಶ್ಚಿತಾರ್ಥ ಶೀಘ್ರದಲ್ಲೇ ನಡೆಯಲಿದೆ. ಡಿಸೆಂಬರ್ 11ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆಯುತ್ತೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ.

ರೆಬಲ್ ಸ್ಟಾರ್ ಅಂಬರೀಶ್ ಅವರ ನಾಲ್ಕನೇ ಸಂಸ್ಮರಣೆ ಕಾರ್ಯಕ್ರಮಕ್ಕೆ ಬಂದಿದ್ದ ನಟ ಅಭಿ ಹಾಗೂ ತಾಯಿ, ಸಂಸದೆ ಸುಮಲತಾ ಅಂಬರೀಶ್ ಇದನ್ನು ನಿರಾಕರಿಸಿದ್ದಾರೆ. ಹುಡಗಿ ಯಾರೂ ಅಂತಾನೆ ಗೊತ್ತಿಲ್ಲ. ಪ್ರತಿ ವರ್ಷ ಎಂಗೇಜ್ ಮೆಂಟ್ ಮಾಡಿಸಿ ನೀವು ಹಿಂಗೆ ಸುದ್ದಿ ಮಾಡಿಯೇ ನನಗೆ ಯಾರೂ ಹೆಣ್ಣು ಕೊಡಲ್ಲ ಎಂದು ನಟ ಅಭಿ ಕಾಲೆಳೆದರು. ಕಳೆದ 15 ದಿನಗಳಿಂದ ಶೂಟಿಂಗ್ ನಲ್ಲಿದ್ದೀನಿ. ಇದರ ಮಧ್ಯೆ ಎಲ್ಲಿ, ಹೇಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿ ಎಂದರು.

ಇನ್ನು ತಾಯಿ ಸುಮಲತಾ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಈ ಮಾತು ಕೇಳಿ ಬರ್ತಿದೆ. ಸಧ್ಯ ಅವನು ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾನೆ. ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ನಡೆಯುತ್ತದೆ ಅನ್ನೋದೆಲ್ಲ ಸುಳ್ಳ ಎಂದರು.




Leave a Reply

Your email address will not be published. Required fields are marked *

error: Content is protected !!