ಚಿಕ್ಕಣ್ಣ-ಕಾನ್ಸಟೇಬಲ್ ಸರೋಜಾ ಮದ್ವೆ ಆಯ್ತಾ?

502

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಈ ನಟಿ ಸ್ಯಾಂಡಲ್ ವುಡ್ ನಲ್ಲಿ ಕೆಲ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ್ರೂ ಹೆಚ್ಚು ಜನರಿಗೆ ಗೊತ್ತಾಗ್ಲಿಲ್ಲ. ನಟಿ ತ್ರಿವೇಣಿ ಅಂದ್ರೆ ಬಹುತೇಕರಿಗೆ ಗೊತ್ತೇ ಆಗುವುದಿಲ್ಲ. ಆದ್ರೆ, ಟಗರು ಚಿತ್ರದ ಕ್ಯಾನ್ಸಟೇಬಲ್ ಸರೋಜಾ ಅಂದ್ರೆ ಸಾಕು, ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಗೊತ್ತಾಗುತ್ತೆ. ಅಷ್ಟರ ಮಟ್ಟಿಗೆ ನಟಿ ತ್ರಿವೇಣಿಗೆ ಆ ಪಾತ್ರ ಸಕ್ಸಸ್ ನೀಡಿದೆ.

ಇದೀಗ ಈ ನಟಿ ಹಾಗೂ ಹಸ್ಯಾನಟ ಚಿಕ್ಕಣ್ಣ ಮದ್ವೆಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ದೇ, ಇವರಿಗೆ ವಿಷ್ ಸಹ ಮಾಡಲಾಗ್ತಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ತ್ರಿವೇಣಿ, ನನ್ಗೆ ಇನ್ನು ಮದುವೆಯಾಗಿಲ್ಲ. ಆಗುವಾಗ ನಿಮ್ಗೆಲ್ಲ ಹೇಳುತ್ತೇನೆ ಬನ್ನಿ ಎಂದಿದ್ದಾರೆ.

ಚಿಕ್ಕಣ್ಣನವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾನೇ ಆ ಫೋಟ್ ವನ್ನ ಪೋಸ್ಟ್ ಮಾಡಿದ್ದೆ. ಚಿತ್ರವೊಂದರ ಶೂಟಿಂಗ್ ಟೈಂನಲ್ಲಿ ತೆಗೆದಿದ್ದ ಫೋಟೋ ಅದು. ಇದನ್ನೆ ಕೆಲವರು ಬಳಸಿಕೊಂಡು ಹೀಗೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!