ಡಾಲಿಯ 12-1=23 ‘ಲೆಕ್ಕಾ’ಚಾರ ಏನ್ ಇರ್ಬೋದು? ರಮ್ಯಾ ಏನಂದರು?

155

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾಲಿ ಧನಂಜಯ್ ಸಧ್ಯ ಸಾಕಷ್ಟು ಬ್ಯುಸಿ ಇರುವ ನಟ, ನಿರ್ಮಾಪಕ. ಸಾಲು ಸಾಲು ಚಿತ್ರಗಳಲ್ಲಿ ನಟನೆಯ ಜೊತೆಗೆ ನಿರ್ಮಾಣ ಸಹ ನಡೆಸಿದ್ದಾರೆ. ಈಗ ಅವರು ವಿಡಿಯೋವೊಂದನ್ನು ಬಿಟ್ಟಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸಿಕ್ಕಾಪಟ್ಟೆ ಕಾಮೆಂಟ್ಸ್ ಗಳು ಬರುತ್ತಿವೆ.

ಏನೇನು ಯೋಚನೆ ಮಾಡುತ್ತಾ, ಮನೆಯ ತುಂಬಾ ಓಡಾಡುತ್ತಾ, ಕುಳಿತುಕೊಂಡು, ಮಲಗಿಕೊಂಡು ಪ್ಯಾಡ್ ನಲ್ಲಿ ಏನೋ ಬರೆಯುತ್ತಾರೆ. ಅವರ ಸ್ನೇಹಿತರು ಅದನ್ನು ಗಮನಿಸುತ್ತಾ ತಲೆ ಕೆಡಿಸಿಕೊಳ್ಳುತ್ತಾರೆ. ನಂತರ ಪ್ಯಾಡ್ ಇಟ್ಟು ಹೋದಾಗ ಗಣಿತದ ಫಾರ್ಮೂಲಾ ಜೊತೆಗೆ ಫೈನಲ್ 12-1=23 ಎಂದು ಬರೆದಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇದು ಹೊಸ ಸಿನಿಮಾ ಟೈಟಲಾ, ಟಗರು ಪಲ್ಯ ರಿಲೀಸ್ ಡೇಟಾ, ಉತ್ತರಕಾಂಡ ರಿಲೀಸ್? ಹೀಗೆ ಹತ್ತು ಹಲವು ಕಾಮೆಂಟ್ಸ್ ಗಳು ಬಂದಿವೆ. ನಟಿ ರಮ್ಯಾ, ನಿಮ್ಮ ಮದುವೆ ದಿನಾಂಕ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಧನು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವಲ್ಲಿ ಸಕ್ಸಸ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!