ಪ್ರಭಾಸ ಮೆಗಾಸ್ಟಾರ್ ಕುಟುಂಬದ ಅಳಿಯ ವಿಚಾರ: ನಟಿ ನಿಹಾರಿಕಾ ಸ್ಪಷ್ಟನೆ

379

ಸೌಥ್ ಸಿನಿ ದುನಿಯಾದ ಸ್ಟಾರ್ ನಟ ಪ್ರಭಾಸ ಮದ್ವೆ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. ನಟಿ ಅನುಷ್ಕಾ ಶೆಟ್ಟಿ ಜೊತೆಗಿನ ಗಾಸಿಪ್ ಗೆ ಈಗಾಗ್ಲೇ ತೆರೆ ಎಳೆಯಲಾಗಿದ್ರೂ ಮತ್ತೆ ಮತ್ತೆ ಅವರಿಬ್ಬರ ಸುತ್ತ ಗಿರಿಕಿ ಹೊಡೆಯುತ್ತೆ. ಇದರ ನಡುವೆ, ಇದೀಗ ಮಗಾಸ್ಟಾರ್ ಚಿರಂಜೀವಿ ಕುಟುಂಬದ ಅಳಿಯ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

ನಟ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗಳು ನಟಿ ನಿಹಾರಿಕಾ ಜೊತೆಗೆ ಪ್ರಭಾಸ ಮದ್ವೆಯಾಗ್ತಾರೆ. ಮಾತುಕತೆ ನಡೆಯುತ್ತಿದೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬರ್ತಿರುವ ಹೊತ್ತಿನಲ್ಲಿಯೇ ನಿಹಾರಿಕಾ ಸ್ಪಷ್ಟನೆ ನೀಡಿದ್ದಾರೆ.

ನಾನು ಪ್ರಭಾಸ ಅವರನ್ನ ಭೇಟಿಯಾಗಿಯೇ ಇಲ್ಲ. ಮದ್ವೆ ದೂರದ ಮಾತು. ಪ್ರಭಾಸ ಜೊತೆಗೆ ನನ್ನ ಮದ್ವೆ ಸುದ್ದಿ ಅದ್ಹೇಗೆ ಹರಡಿತೋ ಗೊತ್ತಿಲ್ಲವೆಂದು ನಟಿ ನಿಹಾರಿಕಾ ಕೋಡಿನೇಲ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಪ್ರಭಾಸ ಮದುವೆ ಸುದ್ದಿ ದಿನಕೊಂದು ಸ್ವರೂಪ ಪಡೆದುಕೊಳ್ತಿದೆ.




Leave a Reply

Your email address will not be published. Required fields are marked *

error: Content is protected !!