ಪ್ರಿಯಾಮಣಿಗೆ ಶಾರುಖ್ ಕೊಟ್ಟ 300 ರೂಪಾಯಿ ಕಥೆ

356

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ನಟಿ ಪ್ರಿಯಾಮಣಿಗೆ 300 ರೂಪಾಯಿ ಕೊಟ್ಟಿರುವ ಕುರಿತು ಹೇಳಿದ್ದಾರೆ. ಸೌಥ್ ಸಿನಿ ದುನಿಯಾದ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿರುವ ಕನ್ನಡದ ಬ್ಯೂಟಿ, ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾದ ಸಾಂಗ್ ವೊಂದರಲ್ಲಿ ಹೆಜ್ಜೆ ಹಾಕಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು.

ಹಾಡಿನ ಶೂಟಿಂಗ್ 5 ದಿನಗಳ ಕಾಲ ನಡೆದಿದೆ. ಬಿಡುವಿನ ವೇಳೆ ಕೌನ್ ಬನೇಗಾ ಕರೋಡಪತಿ ರೀತಿಯಲ್ಲಿ ಆಟವಾಡುತ್ತಿದ್ದಾಗ, ಶಾರುಖ್ ಖಾನ್ ಪ್ರಿಯಾಮಣಿಗೆ 300 ರೂಪಾಯಿ ಕೊಟ್ಟಿದ್ದರಂತೆ. ಅದನ್ನು ಇಂದಿಗೂ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

2003ರಲ್ಲಿ ತೆಲುಗಿನ ಯುವರೀ ಆಟಗಾಡು ಚಿತ್ರದ ಮೂಲಕ ಬಣ್ಣದ ಬದುಕು ಶುರು ಮಾಡಿದರು. ಪರುತ್ತಿವೀರನ್ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕನ್ನಡದ ನಟಿ ಚಂದನವನಕ್ಕೆ ಬಂದಿದ್ದು 2009ರಲ್ಲಿ ರಾಮ್ ಚಿತ್ರದ ಮೂಲಕ. ಇದೀಗ ಬಾಲಿವುಡ್ ನ ದ್ ಫ್ಯಾಮಿಲಿ ಮ್ಯಾನ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿ 8 ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.




Leave a Reply

Your email address will not be published. Required fields are marked *

error: Content is protected !!