ಮುಂದಿನ ಬಾರಿ ಅದ್ಧೂರಿ ಪುನೀತ್ ಹುಟ್ಟು ಹಬ್ಬ: ಅಶೋಕ ಮನಗೂಳಿ

192

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಕನಕದಾಸ ಸರ್ಕಲ್ ಹತ್ತಿರ ಇರುವ ಪೂಜಾರಿ ಓಣಿಯಲ್ಲಿ ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜಕುಮಾರ್ ಅವರ 48ನೇ ಹುಟ್ಟು ಹಬ್ಬವನ್ನು ತುಂಬಾ ಅದ್ಧೂರಿಯಾಗಿ ಆಚರಿಸಲಾಯಿತು. ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರು ಬರೀ ಅವರ ಚಿತ್ರಗಳಿಂದಲ್ಲ ನಿಜ ಬದುಕಿನಿಂದಲೂ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದ್ದಾರೆ. ಅವರು ಸಲ್ಲಿಸಿದ ಸೇವೆಯನ್ನು ಯಾರೂ ಮರೆಯುವಂತಿಲ್ಲ. ತುಂಬಾ ಚಿಕ್ಕ ವಯಸ್ಸಿಗೆ ನಮ್ಮಿಂದ ದೈಹಿಕವಾಗಿ ದೂರವಾಗಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಮುಂದಿನ ಬಾರಿ ಚಿತ್ರ ನಟರೊಬ್ಬರನ್ನು ಆಹ್ವಾನಿಸಿ ಅದ್ಧೂರಿ ಹುಟ್ಟು ಹಬ್ಬವನ್ನು ಈ ವಾರ್ಡಿನಲ್ಲಿ ಆಚರಿಸೋಣ ಎಂದರು.

ನಾವು ಸಹ ಸುಮಾರು 30 ವರ್ಷಗಳಿಂದ ಚಿತ್ರರಂಗದ ಜೊತೆಗೆ ಸಂಪರ್ಕದಲ್ಲಿದ್ದೇವೆ. 1987ರಲ್ಲಿ ಚಿತ್ರಮಂದಿರ ಶುರು ಮಾಡಿ ಅದರಿಂದಲೇ ನಮ್ಮ ತಂದೆ, ನಾವು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ನಾವೆಲ್ಲ ಇನ್ನು ಹೆಚ್ಚಿನ ಸೇವೆಯನ್ನು ಈ ಸಮಾಜಕ್ಕೆ ನೀಡೋಣ ಅಂತಾ ಹೇಳಿದರು. ಇದೆ ವೇಳೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಕಂಚಿನ ಪ್ರತಿಮೆ ನಿರ್ಮಿಸಿಕೊಡಲು ಅಶೋಕ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು.

ಸಿಂದಗಿಯಲ್ಲಿ ಪುನೀತ್ ಅಭಿಮಾನಿಗಳಿಂದ ಅದ್ಧೂರಿ ಮೆರವಣಿಗೆ

ಪುನೀತಗೆ ತುಂಬಾ ಪ್ರಿಯವಾದ ಬಿರಿಯಾನಿ ಊಟವನ್ನು ಸಾರ್ವಜನಿಕರಿಗೆ ನೀಡಲಾಯಿತು. ಇದಕ್ಕೂ ಮೊದಲು ಮುಂಜಾನೆ ಪಟ್ಟಣದಲ್ಲಿ ಬೃಹತ್ ಫೋಟೋದೊಂದಿಗೆ ಭರ್ಜರಿ ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು. ಈ ವೇಳೆ ಜೆಡಿಎಸ್ ಮುಖಂಡ ದಾನಪ್ಪ ಚನ್ನಗೊಂಡ, ಪುರಸಭೆ ಸದಸ್ಯ ಶ್ರೀಶೈಲ ಬೀರಗೊಂಡ, ಮಾಜಿ ಸದಸ್ಯ ಸಿದ್ದು ಬೀರಗೊಂಡ, ತಳವಾರ ಮಹಾಸಭಾ ತಾಲೂಕು ಉಪಾಧ್ಯಕ್ಷ ಮಲ್ಲಪ್ಪ ಹಿರೋಳ್ಳಿ, ಅಮೋಘಿ ಪೂಜಾರಿ, ಪರಶುರಾಮ ಉಪ್ಪಾರ, ಭರತ ಜೇಟರಗಿ, ಹೆಗ್ಗೇರಿ ವಿಭೂತಿಹಳ್ಳಿ, ಮಾಳು ಪೂಜಾರಿ ಸೇರಿ ಅನೇಕರು ಉಪಸ್ಥಿತರಿದ್ದರು.
Leave a Reply

Your email address will not be published. Required fields are marked *

error: Content is protected !!