ವಿಶ್ವ ಸಂಸ್ಥೆಯಲ್ಲಿ ನಟ, ನಿರ್ದೇಶಕ ರಿಷಬ್ ಮಾತು

75

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ಜನ್ಮ ದಿನವಾದ ಮಾರ್ಚ್ 17ರಂದು ವಿಶ್ವ ಸಂಸ್ಥೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಲಿದ್ದಾರೆ. ವಿಶ್ವ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಪರಿಸರ ರಕ್ಷಣೆ, ಹವಾಮಾನದ ಕುರಿತು ಕನ್ನಡದಲ್ಲಿಯೇ ಮಾತನಾಡಲಿದ್ದಾರೆ.

ಕಾಡಂಚಿನ ಜನರ ಸಮಸ್ಯೆಗಳು ಕುರಿತು ಮಾಡಿರುವ ಕಾಂತಾರ ಸಿನಿಮಾ ಸಹ ಇದೆ ವೇಳೆ ಪ್ರದರ್ಶನಗೊಳ್ಳುತ್ತಿದೆ. ಈ ಬಗ್ಗೆ ಬಿಜೆಪಿ ತನ್ನ ಅಧಿಕೃತ ಟ್ವೀಟರ್ ನಲ್ಲಿ ಹಂಚಿಕೊಂಡಿದೆ. ವಿಶ್ವ ಸಂಸ್ಥೆಯಲ್ಲಿ ಮಾತನಾಡಿದ ಮೊದಲ ಕನ್ನಡದ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.

ವಿಶ್ವ ಸಂಸ್ಥೆಯಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕನ್ನಡದ ನಟ ವಿಶ್ವ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವುದಕ್ಕೆ ಎಲ್ಲಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಇನ್ನು ಕಾಂತಾರ ಚಿತ್ರ 2022 ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ವಿ ಆಯಿತು. ದೇಶ್ಯಾದ್ಯಂತ ಇದರ ಬಗ್ಗೆ ಚರ್ಚೆಯಾಗಿ ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಬಿಗ್ ಸಕ್ಸಸ್ ಕಂಡಿತು.

ಕೆಜಿಎಫ್ ಚಿತ್ರದ ಮೂಲಕ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ ಹೊಂಬಾಳೆ ಸಂಸ್ಥೆ ಕಾಂತಾರ ಸಿನಿಮಾ ನಿರ್ಮಿಸಿ ಮತ್ತೊಂದು ಬಿಗ್ ಸಕ್ಸಸ್ ಸಿನಿಮಾ ನೀಡಿತು. ಈಗ ಕಾಂತಾರ ಭಾಗ-2 ಮಾಡಲು ಇದೆ ಸಂಸ್ಥೆ ಮುಂದಾಗಿದೆ.
Leave a Reply

Your email address will not be published. Required fields are marked *

error: Content is protected !!