ಶರಣ ಹುಟ್ಟು ಹಬ್ಬಕ್ಕೆ ಪೋಸ್ಟರ್ ರಿಲೀಸ್

291

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಧ್ಯಕ್ಷ ನಟ ಶರಣಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನೂರಾರು ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ನಟಿಸುತ್ತಲೇ ಹೀರೋ ಆದವರು. ಇಂಥಾ ನಟನ ಹುಟ್ಟು ಹಬ್ಬಕ್ಕೆ ಚಿತ್ರರಂಗದ ಮಂದಿ ಹಾಗೂ ಅವರ ಅಭಿಮಾನಿಗಳು ಶುಭಾಶಯಗಳನ್ನ ತಿಳಿಸ್ತಿದ್ದಾರೆ.

ಇದರ ನಡುವೆ ಅವರ ಹೊಸ ಸಿನಿಮಾ ಗುರು ಶಿಷ್ಯರ ಪೋಸ್ಟರ್ ರಿಲೀಸ್ ಮಾಡಲಾಗಿದೆ. ದೊಡ್ಡ ಮೈದಾನ.. ಸುತ್ತಲು ಜನರು. ಅಂಗಳದಲ್ಲಿ ಬಿದ್ದಿರುವ ಬ್ಯಾಟ್, ಪುಟ್ಬಾಲ್, ವಾಲಿಬಾಲ್, ಬ್ಯಾಡ್ಮಿಟನ್ ಬ್ಯಾಟ್.. ನಟ ಶರಣ ಕೋಕೋ ಕಂಬದ ಮೇಲೆ ಕೈಇಟ್ಟು ನಿಂತಿರುವ ಫೋಟೋ ಕುತೂಹಲ ಮೂಡಿಸ್ತಿದೆ.

ಶರಣ ಸಿನಿಮಾ ಅಂದ್ಮೇಲೆ ನಗುವಿನ ಅಲೆ ಇರಲೇಬೇಕು. ಅದೆ ರೀತಿ ಗುರು ಶಿಷ್ಯರ ಚಿತ್ರ ಸಹ ಇರಲಿದೆ ಎಂದು ಚಿತ್ರ ತಂಡ ಹೇಳ್ತಿದೆ. ಹೀಗಾಗಿ ಇವರ ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!