ಪ್ರಜಾಸ್ತ್ರ ಸುದ್ದಿ
ಮುಂಬೈ: ಬಾಲಿವುಡ್ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರಲು ರೆಡಿಯಾಗಿದ್ದಾರೆ. ಡಿಸೆಂಬರ್ 1, ಮಂಗಳವಾರ ಊರ್ಮಿಳಾ ಶಿವಸೇನೆ ಸೇರಲಿದ್ದಾರೆ ಎಂದು ಸಿಎಂ ಠಾಕ್ರೆ ಆಪ್ತ ಹರ್ಷಾ ತಿಳಿಸಿದ್ದಾರೆ.
ರಾಜ್ಯಪಾಲರ ಕೋಟಾದಲ್ಲಿ ಊರ್ಮಿಳಾ ಹೆಸರನ್ನ ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಶಿವಸೇನೆ ಕಳುಹಿಸಿಕೊಟ್ಟಿದೆ. ಕಾಂಗ್ರೆಸ್, ಶಿವಸೇನೆ, ಎನ್ ಸಿಪಿ ಸೇರಿ 11 ಜನರ ಹೆಸರನ್ನ ಗೌರ್ವನರ್ ಕೋಟಾದಲ್ಲಿ ಸೂಚಿಸಲಾಗಿದ್ದು, ಇದೀಗ 12ನೇ ಹೆಸರಾಗಿ ಊರ್ಮಿಳಾ ಅವರದು ಸೇರಿಕೊಂಡಿದೆ.
ಕಳೆದ 2019ರಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆದಿದ್ದ ಊರ್ಮಿಳಾ, ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ರು. ಆದ್ರೆ, ಗೆಲುವು ಒಲಿದಿರಲಿಲ್ಲ. ಮುಂದೆ ಕಾಂಗ್ರೆಸ್ ನಲ್ಲಿನ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ತೊರೆದು ಹೊರ ಬಂದಿದ್ರು. ಇದೀಗ ಶಿವಸೇನೆ ಸೇರ್ಪಡೆಯಾಗ್ತಿದ್ದಾರೆ.