ವಿಶಾಲ್-ಅಭಿನಯ ನಡುವೆ ಲವ್ವಿಡವ್ವಿ ನಿಜವೇ?

198

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಿತ್ರರಂಗದಲ್ಲಿ ನಟ, ನಟಿಯರ ನಡುವಿನ ಲವ್ವಿಡವ್ವಿ ಬಗ್ಗೆ ಸಾಕಷ್ಟು ಕೇಳಿ ಬರುತ್ತವೆ. ಕೆಲವು ಗಾಸಿಪ್ ಇದ್ದರೆ ಮತ್ತೆ ಕೆಲವು ಸತ್ಯ ಇರುತ್ತವೆ. ಇದೀಗ ತಮಿಳು ಚಿತ್ರರಂಗದ ನಟ ವಿಶಾಲ್ ಹಾಗೂ ನಟಿ ಅಭಿನಯ ನಡುವೆ ಡೇಟಿಂಗ್ ನಡೆಯುತ್ತಿದೆ ಎಂದು ಕೇಳಿ ಬರುತ್ತಿದೆ.

ಮಾರ್ಕ್ ಆಂಟನಿ ಚಿತ್ರದಲ್ಲಿ ನಟ ವಿಶಾಲ್ ಗೆ ಜೋಡಿಯಾಗಿ ನಟಿ ಅಭಿನಯ ಕಾಣಿಸಿಕೊಂಡಿದ್ದಾರೆ. ಆದರೆ, ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಅವರಿಬ್ಬರು ರಿಯಲ್ ಲೈಫ್ ನಲ್ಲಿಯೂ ಒಂದಾಗುತ್ತಾರೆ ಎನ್ನುತ್ತಿದ್ದಾರೆ. ಇದಕ್ಕೆ ನಟಿ ಅಭಿನಯ ಉತ್ತರಿಸಿದ್ದಾರೆ.

ಮಾರ್ಕ್ ಆಂಟನಿ ಚಿತ್ರದಲ್ಲಿ ವಿಶಾಲ್ ಹೆಂಡ್ತಿಯಾಗಿ ಕಾಣಿಸಿಕೊಂಡಿದ್ದೀನಿ. ರೀಲ್ ಲೈಫ್ ನಲ್ಲಿ ಹಂಡ್ತಿಯಾದರೆ ರಿಯಲ್ ಲೈಫ್ ನಲ್ಲಿ ಹೆಂಡ್ತಿ ಆಗಿಬಿಡುತ್ತೀನಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. 3 ವರ್ಷಗಳ ಹಿಂದೆ ಹೈದರಾಬಾದ್ ಮೂಲದ ಅನಿಷಾ ಅಲ್ಲಾ ರೆಡ್ಡಿ ಅವರ ಜೊತೆ ನಿಶ್ಚಿತಾರ್ಥ ನಡೆದು ಮುರಿದು ಬಿತ್ತು ಅನ್ನೋ ಮಾತುಗಳು ಕೇಳಿ ಬಂದವು. ಆದರೆ, ಇದುವರೆಗೂ ಇವರ ಮದುವೆ ನಡೆದಿಲ್ಲ.

ಮಾತು ಬಾರದ, ಸರಿಯಾಗಿ ಕಿವಿ ಕೇಳಿಸಿದ ವಿಶೇಷ ಚೇತನವಾಗಿರುವ ನಟಿ ಅಭಿನಯ, ಅದನ್ನು ಮೀರಿ ಐದು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ನಟನೆಯ ಹುಡುಗರು, ಕಿಚ್ಚ ಸುದೀಪ್ ಅಭಿನಯದ ಕಿಚ್ಚು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!