ನಟಿ ಅನಿಕಾ ಮೇಲೆ ಮಾಜಿ ಪ್ರಿಯಕರನಿಂದ ಗಂಭೀರ ಹಲ್ಲೆ

221

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮಾಲಿವುಡ್ ನಟಿ ಅನಿಕಾ ವಿಕ್ರಮನ್ ಮೇಲೆ ಮಾಜಿ ಪ್ರಿಯಕರ ಗಂಭೀರವಾದ ಹಲ್ಲೆ ಮಾಡಿರುವ ಕುರಿತು ಫೋಟೋಗಳನ್ನು ಸೋಷಿಯಲ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಮಾಜಿ ಪ್ರಿಯಕರ ಅನೂಪ್ ಪಿಲೈ ತನ್ನ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಗಂಭೀರ ಹಲ್ಲೆ ಮಾಡಿದ್ದಾನೆ ಎಂದು ಫೋಟೋ ಹಂಚಿಕೊಂಡಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ತನ್ನ ಹಾಗೂ ತನ್ನ ಕುಟುಂಬಕ್ಕೆ ಸಾಕಷ್ಟು ಬಾರಿ ಜೀವ ಬೆದರಿಕೆ ಕರೆಗಳು ಬಂದಿವೆ. ಆತನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಈಗ ಸುಧಾರಿಸಿಕೊಂಡಿದ್ದು, ವಾಪಸ್ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.

ನಟಿ ಅನಿಕಾಳ ಮೇಲೆ ಹಲ್ಲೆಯಾಗಿರುವ ಫೋಟೋ ನೋಡಿದರೆ ತಿಳಿಯುತ್ತೆ ಎಷ್ಟೊಂದು ಗಂಭೀರ ಸ್ಥಿತಿಯನ್ನು ಅವರು ಅನುಭವಿಸಿದ್ದಾರೆ ಎಂದು. ಬೆಂಗಳೂರಿನಲ್ಲಿ ಜನಿಸಿದ ನಟಿ ಅನಿಕಾ ಬದುಕು ಕಟ್ಟಿಕೊಂಡಿದ್ದು ಮಲಿಯಾಳಂ ಚಿತ್ರರಂಗದಲ್ಲಿ.




Leave a Reply

Your email address will not be published. Required fields are marked *

error: Content is protected !!