ನಟಿ ಕೀರ್ತಿ ಸುರೇಶ್ ಮದುವೆ ಬಗ್ಗೆ ತಂದೆ ಸ್ಪಷ್ಟನೆ

224

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಫರ್ಹಾನ್ ಬಿನ್ ಲಿಯಾಕತ್ ಅನ್ನೋ ಯುವಕನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅವರ ಮದುವೆ ನಿಶ್ಚಿಯವಾಗಿದೆ ಎಂದೆಲ್ಲ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ನಟಿ ತಂದೆ, ನಿರ್ಮಾಪಕ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮಗಳು ಯುವಕನೊಬ್ಬನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ. ಆತನನ್ನು ಮದುವೆಯಾಗುತ್ತಾಳೆ ಎಂದೆಲ್ಲ ಕೆಲ ಮಾಧ್ಯಮಗಳು ಬಂದ ವರದಿಗಳೆಲ್ಲವೂ ಸುಳ್ಳು. ಫರ್ಹಾನ್ ನಮ್ಮ ಕುಟುಂಬದ ಹತ್ತಿರದ ಸ್ನೇಹಿತ. ಆತನ ಹುಟ್ಟು ಹಬ್ಬಕ್ಕೆ ಪೋಟೋ ಪೋಸ್ಟ್ ಮಾಡಿದ್ದಳು. ಅದನ್ನು ತೆಗೆದುಕೊಂಡು ತಮಿಳು ನಿಯತಕಾಲಿಕೆ ಸುದ್ದಿ ಮಾಡಿದೆ. ಇದರಿಂದ ನಮ್ಮ ಕುಟುಂಬದ ನೆಮ್ಮದಿ ಹಾಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೀರ್ತಿ ಮದುವೆ ನಿಶ್ಚಿಯವಾದರೆ ಮೊದಲು ಮಾಧ್ಯಮಗಳಿಗೆ, ಸಾರ್ವಜನಿಕರಿಗೆ ತಿಳಿಸುತ್ತೇವೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!