ಸಹ ನಟನಿಗೆ ಜೀವ ಬೆದರಿಕೆ ಹಾಕಿದ್ರಾ ನಟಿ ನಯನಾ?

85

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ನಯನಾ, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹ ನಟನಿಗೆ ಆವಾಜ್ ಹಾಕಿದ ಘಟನೆ ನಡೆದಿದೆ. ಪೊಲೀಸ್ ಠಾಣೆಯಿಂದಲೇ ಆಡಿಯೋ ಮೆಸೇಜ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.

ಕಾಮಿಡಿ ನಟ ಸೋಮಶೇಖರ್ ಎಂಬುವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಖಾಸಗಿ ವಾಹಿನಿಯ ಮನರಂಜನಾ ಶೋದಲ್ಲಿ ಗೆದ್ದ ಹಣವನ್ನು ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಮೂಡಿದೆ. ನಾವು ಏನು ಮಾಡೋದಕ್ಕೂ ಹೇಸಲ್ಲ. ಬೆಂಗಳೂರಲ್ಲಿ ಹೆಂಗ್ ಓಡಾಡುತ್ತಿ ನೋಡೋಣ ಎಂದು ಧಮ್ಕಿ ಹಾಕಿದ್ದಾರಂತೆ.

ಕಾಮಿಡಿ ಕಿಲಾಡಿ ಶೋ ಮೂಲಕ ಜನಪ್ರಿಯತೆ ಪಡೆದ ಹುಬ್ಬಳ್ಳಿ ಮೂಲದ ನಯನಾ, ಹಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಸಕ್ರಿಯರಾಗಿದ್ದು, ಇದೀಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!