‘ಬುಲ್ ಬುಲ್’ ಬಿಗ್ ಸ್ಕ್ರೀನ್ ಗೆ ಬಂದು 10 ವರ್ಷ

93

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ ಬಹುಬೇಡಿಕೆ ಇರುವ ನಟಿಯರಲ್ಲಿ ಸಧ್ಯ ರಚಿತಾ ರಾಮ್ ಟಾಪ್ ನಲ್ಲಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇಂತಹ ನಟಿ ಮೇ 10, 2023ಕ್ಕೆ ಬಿಗ್ ಸ್ಕ್ರೀನ್ ಗೆ ಪಾದಾರ್ಪಣೆ ಮಾಡಿ 10 ವರ್ಷ ಆಗಿದೆ.

ತೂಗುದೀಪ ಪ್ರೊಡಕ್ಷನ್ ಅಡಿಯಲ್ಲಿ ಎಂ.ಡಿ ಶ್ರೀಧರ್ ನಿರ್ದೇಶನ ಮಾಡಿದ ಬುಲ್ ಬುಲ್ ಚಿತ್ರದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಟಿಸುವ ಮೂಲಕ ನಟಿ ರಚಿತಾ ರಾಮ್ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರು. ಮೊದಲ ಚಿತ್ರವೇ ಅವರಿಗೆ ಸಕ್ಸಸ್ ತಂದು ಕೊಟ್ಟಿತು. ಮುಂದೆ ದರ್ಶನ್ ಜೊತೆ 3 ಚಿತ್ರಗಳಲ್ಲಿ ನಟಿಸಿದರು.

ಸಹೋದರಿ ನಿತ್ಯಾ ರಾಮ್ ಜೊತೆಗೆ ಧಾರವಾಹಿಯಲ್ಲಿ ನಟಿಸುತ್ತಿದ್ದ ರಚಿತಾ ರಾಮ್ ಮೂಲಕ ಹೆಸರು ಬಿಂದ್ಯಾ ರಾಮ್. ಚಿತ್ರರಂಗಕ್ಕೆ ಬಂದ ಮೇಲೆ ರಚಿತಾ ರಾಮ್ ಮಾಡಿಕೊಂಡರು. ಶಿವರಾಜಕುಮಾರ್, ಸುದೀಪ್, ಉಪೇಂದ್ರ, ಶ್ರೀಮುರುಳಿ, ಗಣೇಶ, ಧನಂಜಯ್ ಸೇರಿ ಹಲವು ಸ್ಟಾರ್ ನಟರೊಂದಿಗೆ ನಟಿಸಿದರು. ಸಧ್ಯ 3 ಚಿತ್ರಗಳಲ್ಲಿ ನಟಿ ಕೈಯಲ್ಲಿವೆ. ಜೊತೆಗೆ ಸ್ಮಾಲ್ ಸ್ಕ್ರೀನ್ ಗಳಲ್ಲಿ ಬರುವ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!