ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ತುಪ್ಪದ ಬೆಡಗಿ ಎಂದೇ ಕರೆಸಿಕೊಳ್ಳುವ ನಟಿ ರಾಗಿಣಿ ದ್ವಿವೇದಿ ಹುಟ್ಟು ಹಬ್ಬದಂದು ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಮೇ 24ರಂದು ನಟಿಯ ಜನ್ಮ ದಿನ. ಅಂದು ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಸಹ ಸಮಾಜಮುಖಿ ಕೆಲಸ ಮಾಡಿದ್ದರು. ಜೆನ್ ನೆಕ್ಟ್ ಚಾರಿಟಬಲ್ ವತಿಯಿಂದ ಚಿತ್ರರಂಗದ ವೃದ್ಧ ದಂಪತಿಗಳಿಗಾಗಿ ಓಲ್ಡ್ ಏಜ್ ಹೋಮ್, ಹೆಣ್ಣು ಮಕ್ಕಳ ಶಿಕ್ಷಣದ ಕೆಲಸ, ಮಂಗಳಮುಖಿಯರ ಪರವಾದ ಕೆಲಸವನ್ನು ಸಹ ಮಾಡಿಕೊಂಡು ಬರುತ್ತಿದ್ದಾರೆ.

10 ವರ್ಷದ ಸಿನಿ ಜರ್ನಿಯಲ್ಲಿ ಕನ್ನಡ, ತಮಿಳು, ಹಿಂದಿಯಲ್ಲಿ ನಟಿಸಿದ್ದಾರೆ. ಈ ವೇಳೆ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಜೈಲು ಪಾಲು ಸಹ ಆಗಿದ್ದರು. ಇದಾದ ಬಳಿಕ ನಟಿ ರಾಗಿಣಿ ಚಿತ್ರಗಳ ಸಂಖ್ಯೆ ನಿಂತು ಹೋಯಿತು. ಈಗ ಆಲ್ಬಂ ವಿಡಿಯೋ ಮಾಡುತ್ತಿದ್ದಾರೆ. ವಾಕಾ ಹೌಸ್ ಅನ್ನೋ ಹಿಂದಿ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ಮುಗಿದಿದೆ. ಜನ್ಮ ದಿನದಂದು ಏನಾದರೂ ಹೊಸ ಸುದ್ದಿ ನೀಡುತ್ತಾರ ಕಾದು ನೋಡಬೇಕು.