ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ: ರಾಹುಲ್ ಗಾಂಧಿ

163

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮೋದಿ ಉಪನಾಮದ ಹೇಳಿಕೆ ಸಂಬಂಧ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ತೀರ್ಪು ಪ್ರಕಟಿಸಿದ ಬಳಿಕ ಸಂಸತ್, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ.

ಈ ಕುರಿತು ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ. ನಾನು ರಾಹುಲ್ ಗಾಂಧಿ. ಪ್ರಶ್ನೆ ಮಾಡುತ್ತಲೇ ಇರುತ್ತೇನೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದ್ದಕ್ಕೆ ಈ ರೀತಿಯಾಗಿ ಪ್ರತ್ಯುತ್ತರ ನೀಡಿದ್ದಾರೆ.

ಈ ಸರ್ಕಾರ ಅದಾನಿ ಅಂದರೆ ದೇಶ. ದೇಶ ಎಂದರೆ ಅದಾನಿ ಎನ್ನುತ್ತಿದೆ. ನನ್ನನ್ನು ಶಾಶ್ವತವಾಗಿ ಅನರ್ಹ ಮಾಡಿದರೂ ಅಂಜುವುದಿಲ್ಲ. ಸಂಸತ್ ಒಳಗೂ ಅಥವ ಹೊರಗೂ ಇದ್ದರೂ ಈ ದೇಶಕ್ಕಾಗಿ ಹೋರಾಟ ಮಾಡುತ್ತೇನೆ. ಅದಾನಿ ಕುರಿತು ನಾನು ಮಾತನಾಡುತ್ತೇನೆ ಅನ್ನೋ ಭಯದಲ್ಲಿ ಪ್ರಧಾನಿ ಇದ್ದಾರೆ.

ನಾನು ಅನರ್ಹತೆ, ಬಂಧನದ ಬಗ್ಗೆ ತಲೆ ಕೆಡಿಸಿಕೊಳ್ಳವುದಿಲ್ಲ. ಸತ್ಯದ ಪರವಾಗಿ ಹೋರಾಟ ಮಾಡುತ್ತಲೇ ಇರುತ್ತೇನೆ. ಈ ದೇಶ ನನಗೆ ಎಲ್ಲವನ್ನು ನೀಡಿದೆ. 20 ಸಾವಿರ ಕೋಟಿ ಅದಾನಿಯ ಶೆಲ್ ಕಂಪನಿಗೆ ಹೋಗಿದೆ ಎನ್ನುವ ಸರಳ ಪ್ರಶ್ನೆಗೆ ಪ್ರಧಾನಿಯಿಂದ ಇಷ್ಟೊಂದು ನಾಟಕ. ಇಂತಹ ಬೆದರಿಕೆ, ಅನರ್ಹತೆ, ಶಿಕ್ಷೆಗೆ ನಾನು ಹೆದರುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!