ಅಭಿ-ಡಿ ಬಾಸ್ ಸಾಂಗ್ ರಿಲೀಸ್

423

ಬೆಂಗಳೂರು : ನಟ ಅಭಿ-ಡಿ ಬಾಸ್ ಜೋಡಿಯ ಡ್ಯಾನ್ಸ್ ರಿಲೀಸ್ ಆಗಿದೆ. ನಟ ಅಭಿಷೇಕ್ ಗೌಡ ನಟನೆಯ ‘ಅಮರ’ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಇದರ ವಿಶೇಷ ಏನಪ್ಪ ಅಂದ್ರೆ ಅಭಿಗೆ ನಟ ದರ್ಶನ್ ಸಾಥ್ ಕೊಟ್ಟಿದ್ದಾರೆ.

ಅಮರ ಚಿತ್ರದಲ್ಲಿ ನಟ ದರ್ಶನ್ ಸಹ ನಟಿಸಿದ್ದು, ‘ಜೋರು ಪಾಟು’ ಅನ್ನೋ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಸಹ ಮಾಡಿದ್ದಾರೆ. ಈ ಹಾಡು ಪ್ರೇಕ್ಷಕರನ್ನ ರಂಜಿಸಲು ಬಿಡುಗಡೆ ಮಾಡಲಾಗಿದ್ದು, ಕೊಡಗು ಶೈಲಿಯನ್ನ ಹಾಡಿಗೆ ಬಳಸಿಕೊಳ್ಳಲಾಗಿದೆ. ಈಗಾಗ್ಲೇ, ಅಮರ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದ್ದು, ಈ ಚಿತ್ರ ತಂಡ ಒಂದೊಂದೆ ಹಾಡುಗಳನ್ನ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡತ್ತಿದೆ.

ದರ್ಶನ್-ಅಭಿ

ಸಿನಿಮಾ ಸಕ್ಸಸ್ ಗಾಗಿ ಏನು ಮಾಡಬೇಕೋ ಅದೆಲ್ಲವನ್ನು ಚಿತ್ರ ತಂಡ ಫುಲ್ ಜೋರಾಗಿಯೇ ಮಾಡುತ್ತಿದೆ. ನಟ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಡಿ-ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಎಲ್ಲ ಕುತೂಹಲಕ್ಕೆ ಇದೇ 30ರಂದು ತೆರೆ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!