ಕಡಲ ಅಲೆಗಳ ಮೇಲಿನ ಮನೆ ಎಲ್ಲಿದೆ? ದಿನದ ಬಾಡಿಗೆ ಎಷ್ಟು ಗೊತ್ತಾ?

510

ಪ್ರಜಾಸ್ತ್ರ ಸುದ್ದಿ

ಇಲ್ಲಿನ ಫೋಟೋಗಳನ್ನ ನೋಡ್ತಿದ್ರೆ ವಾಹ್ಹಾ ಎನ್ನುವಂತಿವೆ. ಇಲ್ಲಿ ನಾವೂ ಇರಬೇಕು ಅನಿಸುತ್ತೆ. ಅಷ್ಟೊಂದು ಸುಂದರವಾದ ಜಾಗ. ಕಡಲ ಅಲೆಗಳ ಮೇಲಿನ ಮನೆಯ ಅಂದಕ್ಕೆ ಮಾರು ಹೋಗದವರೆ ಇಲ್ಲ. ಅಂದ್ಹಾಗೆ ಇದು ನಿರ್ಮಾಣವಾಗ್ತಿರುವುದು ಫ್ರೆಂಚ್ ಪ್ಯಾಲಿನೇಷ್ಯಾದ ದ್ವೀಪದಲ್ಲಿ.

ತುಂಬಾ ವೈಭವದಿಂದ ಕೂಡಿರುವ ಹಡಗು ಮನೆ 360 ಡಿಗ್ರಿ ಆ್ಯಂಗಲ್ ನಲ್ಲಿದೆ. ನಾಲ್ಕು ಬೆಡ್ ರೂಮ್ ಗಳನ್ನ ಹೊಂದಿದೆ. ಎರಡು ಬಾತ್ ರೂಂ ಇದೆ. ಸುಸಜ್ಜಿತವಾದ ಅಡುಗೆ ರೂಮ್, ಡೈನಿಂಗ್ ಹಾಲ್ ಒಳಗೊಂಡಿದೆ. ಇದು 51 ಅಡಿ ಉದ್ದ, 1,291 ಚದರ ಅಡಿ ವಿಸ್ತೀರ್ಣ ಹೊಂದಿದೆ. ಎರಡು ಅಂತಸ್ತಿನಿಂದ ರೆಡಿಯಾಗ್ತಿರುವ ಬೋಟ್ ಹೌಸ್ 8 ಜನ ಅತಿಥಿಗಳಿಗೆ ಸೂಕ್ತವಾಗಿದೆ.

ಬೋರಾ ಬೋರಾ ಮೂಲದ ಎಲಿಟ್ ಚಾರ್ಟರ್ ಟಹೀಟಿ ಕಂಪನಿ ಇದನ್ನ ನಿರ್ಮಾಣ ಮಾಡ್ತಿದೆ. ಒಳಾಂಗಣ ವಿನ್ಯಾಸ, ಹೊರಗಿನ ಸ್ಟೈಲ್, ಸಮುದ್ರದ ಸುತ್ತಲಿನ ಸೌಂದರ್ಯ, ಮುಂಜಾನೆ ಸಂಜೆ ಹೊತ್ತಿಗೆ ಕಾಣಿಸುವ ಸೂರ್ಯೋದಯ, ಸೂರ್ಯಸ್ತ ದೃಶ್ಯ ಕಣ್ಮನಗಳಿಗೆ ಹಬ್ಬದಂತೆ ಕಾಣಿಸುತ್ತೆ. ಹಡಗುಮನೆಯ ಕ್ಯಾಪ್ಟನ್ ನೀವು ಆಯ್ಕೆ ಮಾಡಿದ ಜಾಗಕ್ಕೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬರುತ್ತಾನೆ.

ಸುಂದರವಾದ ನೀರಿನ ಮೇಲೆ ಚಲಿಸುವ ಮನೆ ಈಗಾಗ್ಲೇ ರೆಡಿಯಾಗಬೇಕಿತ್ತು. ಕರೋನಾ ಎಫೆಕ್ಟ್ ನಿಂದಾಗಿ ತಡವಾಗಿದೆ. ಹೀಗಾಗಿ ಇನ್ನು ಒಂದಿಷ್ಟು ಕೆಲಸಗಳು ಬಾಕಿ ಉಳಿದಿದ್ದು, ಈ ವರ್ಷದ ಅಂತ್ಯಕ್ಕೆ ಲಾಂಚ್ ಮಾಡಲಾಗುತ್ತೆ ಎಂದು ಹೇಳಲಾಗ್ತಿದೆ. ಅಂದ್ಹಾಗೆ ಇಲ್ಲಿ ಒಂದು ದಿನದ ಬಾಡಿಗೆ ಬರೋಬ್ಬರಿ 1,31,217.63 ರೂಪಾಯಿಯಾಗುತ್ತೆ. ಇಲ್ಲಿ ಭೇಟಿ ನೀಡುವವರು ಬ್ಯಾಗ್ ತುಂಬ ಹಣ ರೆಡಿ ಮಾಡಿಕೊಳ್ಳಿ.




Leave a Reply

Your email address will not be published. Required fields are marked *

error: Content is protected !!