ಇಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ

203

ಪ್ರಜಾಸ್ತ್ರ ಸುದ್ದಿ

ವಿಜಯವಾಡ: ಇವತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಕಾಲಿಟ್ಟಿದ್ದಾಳೆ. ಪುರುಷರ ಸಮನಾಗಿ ಕೆಲಸ ನಿರ್ವಹಿಸುವ ಮೂಲಕ ಪ್ರತಿಯೊಂದು ರಂಗದಲ್ಲಿ ತಮ್ಮದೆಯಾದ ಸಾಧನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಾಣವಾದ ಈ ರೈಲು ನಿಲ್ದಾಣದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅದು ಮತ್ಯಾವುದೂ ಅಲ್ಲ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಚಂದ್ರಗಿರಿಯ ರೈಲು ನಿಲ್ದಾಣ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಕಳೆದ 4 ವರ್ಷಗಳ ಹಿಂದೆ ಮಹಿಳಾ ಚಾಲಿತ ರೈಲು ನಿಲ್ದಾಣ ಸ್ಥಾಪಿಸಲಾಯಿತು. ಇಲ್ಲಿ ಒಬ್ಬ ಸೂಪರಿಡೆಂಟ್, ಮೂವರು ಸಹಾಯಕ ಅಧೀಕ್ಷಕರು, ಒಬ್ಬ ಸಹಾಯ ಸಿಬ್ಬಂದಿ ಸೇರಿದಂತೆ 14 ಇಲಾಖೆಗಳ ಉಸ್ತುವಾರಿಯನ್ನು ಮಹಿಳೆಯರೆ ನೋಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಕಂಪ್ಲೇಟ್ ಇವರ ಕೆಲಸದ ವಿರುದ್ಧ ಬಂದಿಲ್ಲ. ತಮ್ಮ ಪ್ರಾಮಾಣಿಕ ಕೆಲಸದಿಂದ ಎಲ್ಲರ ಮೆಚ್ಚುಗೆಯನ್ನು ಇಲ್ಲಿನ ಮಹಿಳಾ ಸಿಬ್ಬಂದಿ ಪಡೆದಿದ್ದಾರೆ. ಲಿಂಗ ತಾರತಮ್ಯವನ್ನು ಕಡಿಮೆ ಮಾಡುವಲ್ಲಿ ಈ ನಿಲ್ದಾಣ ಬಹುದೊಡ್ಡ ಪಾತ್ರ ವಹಿಸಿದೆ.




Leave a Reply

Your email address will not be published. Required fields are marked *

error: Content is protected !!