ಆ ಒಂದು ಕಾರಣಕ್ಕೆ 17 ವರ್ಷ ಸೂಪರ್ ಹಿಟ್ ಜೋಡಿ ನಟಿಸಲಿಲ್ಲ

455

ಬಾಲಿವುಡ್ ಅಂಗಳದಲ್ಲಿ ಅನಿಲ ಕಪೂರ್ ಹಾಗೂ ಮಾಧುರಿ ದೀಕ್ಷಿತ ಜೋಡಿ ಅಂದ್ರೆ ಸೂಪರ್ ಹಿಟ್ ಜೋಡಿ ಎಂದೇ ಫೇಮಸ್ ಆಗಿತ್ತು. ನಟ ಅನಿಲ ಕಪೂರ್ ಹಾಗೂ ಮಾಧುರಿ ನಟಿಸ್ತಿದ್ದಾರೆ ಅಂದ್ರೆ, ಅದು ಸೂಪರ್ ಹಿಟ್ ಆಗುತ್ತೆ ಅನ್ನೋ ಮಾತುಗಳು 90ರ ದಶಕದಲ್ಲಿ ಕೇಳುತಿತ್ತು. ಆದ್ರೆ, 2000 ವರ್ಷದ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ.

ತೇಜಾಬ್ ಮೂವಿ ಮೂಲಕ ನಟ ಅನಿಲ ಕಪೂರ್ ಹಾಗೂ ಮಾಧುರಿ ದೀಕ್ಷಿತ ಒಟ್ಟಿಗೆ ಕಾಣಿಸಕೊಂಡ್ರು. ಮುಂದೆ, ರಾಮ್ ಲಖನ್, ಲಖನ್, ಜಿಂದಗಿ ಏಕ್ ಜುಮಾ, ಭೇಟ್, ಖೇಲ್, ಜಮಾಯಿ, ರಾಜಕುಮಾರ ಸೇರಿದಂತೆ ಹಲವು ಸೂಪರ್ ಹಿಟ್ ಮೂವಿಗಳನ್ನ ನೀಡಿದ್ರು. ಹೀಗಾಗಿ ಈ ಜೋಡಿ ಒಂದಿಷ್ಟು ಸಲುಗೆ ಇತ್ತು. ಇವರಿಬ್ಬರ ಸ್ನೇಹ ಬೇರೆಯವರ ಕಣ್ಣಿಗೆ ಬೇರೆ ರೀತಿ ಕಾಣಿಸಿಕೊಂಡಿತು.

ಯಾವಾಗ ಅನಿಲ ಕಪೂರ್, ಮಾಧುರಿ ನಡುವಿನ ಸ್ನೇಹ, ಇದನ್ನೂ ಮೀರಿದ್ದು ಅನಿಸಲು ಶುರು ಮಾಡಿತು. ಇದು ಬಿಟೌನ್ ದುನಿಯಾದಲ್ಲಿ ಭರ್ಜರಿ ಸೌಂಡ್ ಮಾಡಿತು. 90ರ ದಶಕದಲ್ಲಿ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದ ಜೋಡಿ ನಡುವೆ ಕೇಳಿ ಬಂದ ಅಫೇರ್ ಗಾಸಿಪ್ ನಿಂದ ತಾವು ಇನ್ಮುಂದೆ ಒಟ್ಟಿಗೆ ಕಾಣಿಸಿಕೊಳ್ಳದೆ ಇರೋದಕ್ಕೆ ನಿರ್ಧಾರ ಮಾಡಿದ್ರಂತೆ. ಹೀಗಾಗಿ 2000ರಲ್ಲಿ ಪುಕಾರ್ ಸಿನ್ಮಾದ ಬಳಿಕ ಇವರಿಗೆ ಒಟ್ಟಿಗೆ ನಟಿಸಲಿಲ್ಲ. ಈ ವಿಚಾರವನ್ನ ನಟಿ ಮಾಧುರಿ ದೀಕ್ಷಿತ ಬಹಿರಂಗ ಪಡಿಸಿದ್ದಾರೆ.

ಹೀಗೆ 17 ವರ್ಷಗಳ ಕಾಲ ಜೋಡಿಯಾಗಿ ನಟಿಸಿದ ಅನಿಲ ಕಪೂರ್ ಹಾಗೂ ಮಾಧುರಿ ದೀಕ್ಷಿತ 2017ರಲ್ಲಿ ಟೋಟಲ್ ಧಮಾಕ್ ಅನ್ನೋ ಚಿತ್ರದಲ್ಲಿ ನಟಿಸಿತು. ಬಟ್, ಸಿನ್ಮಾ ಸಕ್ಸಸ್ ಆಗಲಿಲ್ಲ. ಆದ್ರೆ, ಈ ಮೂಲಕ ಈ ಜೋಡಿಯನ್ನ ಮತ್ತೆ ಬಿಗ್ ಸ್ಕ್ರೀನ್ ಮೇಲೆ ನೋಡಬೇಕು ಅನ್ನೋ ಫ್ಯಾನ್ಸ್ ಆಸೆ ಈಡೇರಿತ್ತು.




Leave a Reply

Your email address will not be published. Required fields are marked *

error: Content is protected !!