ನಿರ್ದೇಶಕ ಕಶ್ಯಪ್ ವಿರುದ್ಧ ಅತ್ಯಾಚಾರ ಸಂಬಂಧಿತ ದೂರು

281

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಿನಿಮಾ ಜಗತ್ತು ನೋಡಲು ಎಷ್ಟೊಂದು ಚೆಂದ ಕಾಣಿಸುತ್ತೋ ಅಷ್ಟೇ ಭಯಾನಕವಾಗಿದೆ. ನಟಿಯರನ್ನ ಮೇಲೆ ನಟರು, ನಿರ್ದೇಶಕರು, ನಿರ್ಮಾಪಕರು ಹೇಗೆಲ್ಲ ನಡೆಸಿಕೊಳ್ತಾರೆ. ಇವರ ಮೇಲೆ ಹೇಗೆಲ್ಲ ಲೈಂಗಿಕ ದೌರ್ಜನ್ಯ ನಡೆಯುತ್ತಿವೆ ಎಂದು ಹಲವು ನಟಿಯರು ಈ ಹಿಂದೆ ಹೇಳಿದ್ದಾರೆ. ಈಗ್ಲೂ ಹೇಳ್ತಿದ್ದಾರೆ. ಆ ಸಾಲಿಗೆ ಇದೀಗ ನಟಿ ಪಾಯಲ್ ಘೋಷ್ ಸೇರಿಕೊಂಡಿದ್ದಾಳೆ.

ನಿರ್ದೇಶಕ ಅನುರಾಗ ಕಶ್ಯಪ್ ವಿರುದ್ಧ ವಿವಿಧ ಠಾಣೆಗಳಲ್ಲಿ ನಟಿ ಪಾಯಲ್, ಅತ್ಯಾಚಾರ ಸಂಬಂಧಿಸಿದ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ನಟಿ ಪರ ವಕೀಲ ನಿತೀನ ಸತಪುತೆ ಹೇಳಿದ್ದಾರೆ. ಅಲ್ದೇ ಇಷ್ಟು ದಿನ ಯಾಕೆ ಹೇಳಿಲ್ಲ. ಸುಮ್ಮನೆ ಯಾಕೆ ಕುಳಿತಿದ್ರು ಎಂದು ಕೇಳಿದ್ರೆ, ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತೆ. ಬಾಲಿವುಡ್ ನಿರ್ಬಂಧ ಹೇರುತ್ತೆ ಎಂದು ಜೊತೆಗಾರರು ಈ ಬಗ್ಗೆ ಮಾತ್ನಾಡದಂತೆ ಹೇಳಿದ್ರಂತೆ.

ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ 2 ಬಾರಿ ಮನೆಗೆ ಕರೆಸಿಕೊಂಡಿದ್ದ ಅನುರಾಗ ಕಶ್ಯಪ್, ಮೂರನೇ ಬಾರಿಗೆ ಮನೆಗೆ ಹೋದಾಗ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ್ದಾಳೆ. ಅಲ್ದೇ, ನಾನು 200ಕ್ಕೂ ಹೆಚ್ಚು ಹುಡುಗಿಯರೊಂದಿಗೆ ಮಲಗಿದ್ದೇನೆ. ತುಂಬಾ ಒಳ್ಳೆಯ ಸಮಯ ನೀಡಿದ್ದಾರೆ ಎಂದು ಹೇಳಿದ್ದಾಗಿ ನಟಿ ಪಾಯಲ್ ಘೋಷ್ ಆರೋಪಿಸಿದ್ದಾಳೆ. ನಟಿ ತಾಪ್ಸಿ ಪನ್ನು ಅನುರಾಗ ಕಶ್ಯಪ್ ಪರ ಬ್ಯಾಟ್ ಬೀಸಿ ನಟಿ ವಿರುದ್ಧ ಹರಿಹಾಯ್ದಿದ್ದಾಳೆ.




Leave a Reply

Your email address will not be published. Required fields are marked *

error: Content is protected !!