ಸೇನಾ ವಾಹನ ಅಪಘಾತ: 16 ಯೋಧರು ಹುತಾತ್ಮ

177

ಪ್ರಜಾಸ್ತ್ರ ಸುದ್ದಿ

ಸಿಕ್ಕಿಂ: ಭಾರತ-ಚೀನಾ ಗಡಿ ಹತ್ತಿರದ ಗ್ಯಾಂಗ್ಟಾಕ್ ನಲ್ಲಿ ಸೇನಾ ವಾಹನ ಕಮರಿಗೆ ಬಿದ್ದ ಪರಿಣಾಮ 16 ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

20 ಯೋಧರೊಂದಿಗೆ ಗಡಿ ಭಾಗದ ಚೆಕ್ ಪೋಸ್ಟ್ ಗಳತ್ತ ವಾಹನ ಹೊರಟಿತ್ತು. ಈ ವೇಳೆ ಸ್ಕಿಡ್ ಆಗಿ ನೂರಾರು ಅಡಿ ಆಳದ ಕಮರಿಗೆ ಬಿದ್ದಿದೆ. ಗಾಯಾಳುಗಳನ್ನು ಉತ್ತರ ಬಂಗಾಳದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!