ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟಿ ಆಶಿಕಾ ರಂಗನಾಥ್ ಕುಡಿತದ ವಿಡಿಯೋ ಲೀಕ್ ಆಗಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ. ಇದು ನಿಜವೆಂದು ನಟಿಯ ಬಗ್ಗೆ ವಾಗ್ದಾಳಿ ನಡೆಸಲಾಗುತ್ತಿದೆ. ಜೊತೆಗೆ ರೆಮೊ ಚಿತ್ರದ ಸಲುವಾಗಿ ಪ್ರಚಾರದ ಗಿಮಿಕ್ ನಡೆಸಿದ್ದಾರೆ ಎನ್ನುತ್ತಿದ್ದಾರೆ. ಇದರ ನಡುವೆ ರೆಮೊ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಕ್ಷಮೆ ಕೇಳಿದ್ದಾರೆ.
ಶೂಟಿಂಗ್ ಟೈಂನಲ್ಲಿ ಮೇಕಿಂಗ್ ವಿಡಿಯೋಗಳನ್ನು ಪ್ರಚಾರಕ್ಕೆ ಬಳಿಸಿಕೊಳ್ಳಲು ಮಾರ್ಕೆಟಿಂಗ್ ಟೀಂಗೆ ಕೆಲವು ದೃಶ್ಯಗಳನ್ನು ನೀಡಲಾಗಿತ್ತು. ಈ ವಿಡಿಯೋವನ್ನು ಬಳಸಿಕೊಳ್ಳಲಾಗಿದೆ. ಅದು ತಪ್ಪಾಗಿ ಸಂದೇಶ ಹೋಗಿದೆ. ಆಶಾಕಿ ಬಗ್ಗೆ ತಪ್ಪಾದ ಭಾವನೆ ಜನರಲ್ಲಿ ಮೂಡುತ್ತಿದೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.