ಆಸ್ತಿ ವಿಚಾರವಾಗಿ ರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ

189

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಆಸ್ತಿ ವಿಚಾರವಾಗಿ ಮಹಿಳೆಯ ಮೇಲೆ ನಡುರಸ್ತೆಯಲ್ಲೇ ಮೂವರು ಸಂಬಂಧಿಕರು ಹಲ್ಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಲಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಮಹಾದೇವಿ ಫಿರಾಪೂರ ಅನ್ನೋ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಆನಂದ ಬಿರಾದಾರ, ಶ್ರೀಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬುವರು ಮಹಾದೇವಿ ಮೇಲೆ ಮಾಡಿದ್ದಾರೆ. ಜಲಪುರ ಗ್ರಾಮದಲ್ಲಿನ 1 ಎಕರೆ ಜಮೀನಿಗಾಗಿ ಈ ರೀತಿಯಾಗಿ ಹಲ್ಲೆ ಮಾಡಿದ್ದಾರೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!