ಇಂದಿನಿಂದ ಎಟಿಎಂ ಸೇವೆ ಶುಲ್ಕ ಹೆಚ್ಚಳ

414

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಆರ್ ಬಿಐ ಈಗಾಗ್ಲೇ ಸೂಚಿಸಿರುವಂತೆ ಇಂದಿನಿಂದ ಎಟಿಎಂ ಬಳಕೆದಾರರ ಉಚಿತ ಮಿತಿ ಮೀರಿದ ನಂತರ ಪ್ರತಿ ವಹಿವಾಟಿನ ಮೇಲೆ ವಿಧಿಸುವ ಶುಲ್ಕದ ಮೊತ್ತದಲ್ಲಿ 1 ರೂಪಾಯಿ ಏರಿಕೆ ಮಾಡಿದೆ. ಈ ಮೂಲಕ ಇಂದಿನಿಂದ 21 ರೂಪಾಯಿ ಕಡಿತಗೊಳ್ಳಲಿದೆ.

ಒಂದು ತಿಂಗಳಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಎಂಟಿಎಂನಲ್ಲಿ 5 ಬಾರಿ ಉಚಿತವಾಗಿ ಹಣ ಪಡೆಯುವ ಮತ್ತು ತುಂಬುವ ಸೇವೆ ಪಡೆಯಬಹುದು. 5ರ ನಂತರದ ಪ್ರತಿ ಸೇವೆಗೆ 21 ರೂಪಾಯಿ ಕಟ್ ಆಗಲಿದೆ. ಇನ್ನು ಮೆಟ್ರೋ ಸಿಟಿಗಳಲ್ಲಿ ಇತರೆ ಬ್ಯಾಂಕ್ ಗಳಲ್ಲಿ ಗರಿಷ್ಠ ಮಿತಿ 3, ಮೆಟ್ರೋ ಕೇಂದ್ರಗಳಲ್ಲದ ಊರುಗಳಲ್ಲಿ ಗರಿಷ್ಠ 5ರ ವರೆಗೆ ಎಟಿಎಂ ವಹಿವಾಟು ನಡೆಸಬಹುದು.

ಇಂದಿನಿಂದ ಎಂಟಿಎಂ ಬಳಕೆದಾರರು ಈ ಎಲ್ಲ ಅಂಶಗಳನ್ನು ತಿಳಿದುಕೊಂಡಿರಬೇಕು. ಇಲ್ಲದೇ ಹೋದರೆ ನಿಮ್ಮ ಮಿತಿ ಮೀರಿದರೆ 21 ರೂಪಾಯಿ ಸೇವಾ ಶುಲ್ಕ ಕಟ್ಟಬೇಕಾಗುತ್ತೆ. ಹೀಗಾಗಿ ಎಟಿಎಂನಲ್ಲಿ ಹಣ ಇದೆಯೋ ಇಲ್ಲವೋ ಅನ್ನೋದು ಪರಿಶೀಲಿಸುವ ಸ್ಥಿತಿ ಬಂದಿದೆ.




Leave a Reply

Your email address will not be published. Required fields are marked *

error: Content is protected !!