ಸಿಲಿಕಾನ್ ಸಿಟಿಯಲ್ಲಿ ಆಟೋ ಚಾಲಕರ ಮುಷ್ಕರ

174

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾರ್ಚ್ 21ರಂದು ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನಿಗಮಗಳ ಸಮಾನ ಮನಸ್ಕರ ವೇದಿಕೆ, ನೌಕರರ ಜಂಟಿ ಕ್ರಿಯಾ ಸಮಿತಿ ಪ್ರತಿಭಟನೆಯಿಂದ ಹಿಂದೆ ಸರಿದಿದೆ. ಆದರೆ, ಆಟೋ ಚಾಲಕರು ಇಂದು ತಮ್ಮ ಮುಷ್ಕರ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನಿರ್ಬಂಧಿಸಬೇಕು ಎಂದು ಹೇಳಿ ಆಟೋದವರು ಮುಷ್ಕರ ನಡೆಸುತ್ತಿದ್ದಾರೆ. ಇದು ನಾಳೆಯೂ ಮುಂದುವರೆಯುವ ಸಾಧ್ಯತೆ ಇದೆ. ನಗರದಲ್ಲಿ 21 ಆಟೋ ಚಾಲಕರ ಸಂಘಟನೆಗಳಿವೆ. ಸುಮಾರು 2.10 ಲಕ್ಷ ಆಟೋಗಳಿವೆ. ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಗೊಳಿಸಿ ಭಾನುವಾರ ಸಂಜೆ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕೇಳಿಕೊಂಡಿದ್ದರು. ಆದರೆ, ಸರ್ಕಾರದಿಂದ ಇದಕ್ಕೆ ಯಾವುದೇ ಉತ್ತರ ಬಂದಿಲ್ಲ.

ಸರ್ಕಾರದ ಮೌನದಿಂದಾಗಿ ಆಟೋ ಚಾಲಕರು ಇಂದು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈಗಾಗ್ಲೇ ದೆಹಲಿ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಲಾಗಿದೆ. ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕರ ಆದಾಯಕ್ಕೆ ಹೊಡೆತ ಬೀಳುತ್ತೆ ಅನ್ನೋದು ಅವರ ವಾದ. ಇನ್ನೊಂದು ಕಡೆ ಕಡಿಮೆ ಬಂಡಾವಳದಲ್ಲಿ ಜೀವನ ನಿರ್ವಹಣೆ ಮಾಡಬೇಕು ಅನ್ನೋರಿಗೆ ಬೈಕ್ ಟ್ಯಾಕ್ಸಿ ಸಹಕಾರಿ ಹಾಗೂ ಕಡಿಮೆ ಖರ್ಚಿನಲ್ಲಿ ಸಾರಿಗೆ ಸೇವೆ ಸಿಕ್ಕರೆ ಜನರಿಗೆ ಒಂದಿಷ್ಟು ಹೊರೆ ಕಡಿಮೆಯಾಗುತ್ತೆ. ಯಾಕಂದರೆ, ಒಬ್ಬರಿಗೆ ನೂರಾರು ರೂಪಾಯಿ ಕೊಟ್ಟು ಹೋಗುವ ಬದಲು ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಬಹುದು ಅನ್ನೋದು ಮತ್ತೊಂದು ವಾದ.




Leave a Reply

Your email address will not be published. Required fields are marked *

error: Content is protected !!