ಭಾರತದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಅವತಾರ್-2

261

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಾಲಿವುಡ್ ಸಿನಿಮಾ ಅವತಾರ್ ಇಡೀ ಜಗತ್ತಿನ ಸಿನಿಮಾ ಬಾಕ್ಸ್ ಆಫೀಸ್ ಉಡೀಸ್ ಮಾಡಿತ್ತು. ಈ ಮೂಲಕ ಟೈಟಾನಿಕ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿತ್ತು. ಈಗ ಅವತಾರ್ ದ್ ವೇ ಆಫ್ ವಾಟರ್ ಶುಕ್ರವಾರ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಭಾರತದಲ್ಲಿ ಕನ್ನಡ ಸೇರಿ ಪಂಚ ಭಾಷೆಗಳಲ್ಲಿ ಅವತಾರ್-2 ಪ್ರದರ್ಶನ ಕಂಡಿದೆ.

ಭಾರತದಲ್ಲಿ ಒಟ್ಟಾರೆಯಾಗಿ ಮೊದಲ ದಿನ 53.10 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಭಾರತೀಯ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಇದರೊಂದಿಗೆ ಹಾಲಿವುಡ್ ನ 2ನೇ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ದಿನ ಇಷ್ಟೊಂದು ಕಲೆಕ್ಷನ್ ಮಾಡಿರುವುದು. 2009ರಲ್ಲಿ ಬಂದ ಅವತಾರ್-1 100 ಕೋಟಿ ಗಳಿಕೆ ಮಾಡಿತ್ತು. ಭಾರತದಲ್ಲಿ 3,800 ಸ್ಕ್ರೀನ್ ಗಳಲ್ಲಿ ತೆರೆ ಕಂಡಿದೆ. 17 ಸಾವಿರಕ್ಕೂ ಹೆಚ್ಚು ಶೋಗಳನ್ನು ಕಂಡಿದೆ. ಮೆಲ್ಟಿಫೆಕ್ಸ್ ನಲ್ಲಿ 2,500 ರೂಪಾಯಿ ತನಕ ಒಂದು ಟಿಕೆಟ್ ಮಾರಾಟವಾಗಿದೆ.

ಅವತಾರ್-2 ಚಿತ್ರ ಬರೋಬ್ಬರಿ 7,500 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಜಗತ್ತಿನಾದ್ಯಂತ 3 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಾರಂತ್ಯದ ವೇಳೆಗೆ 500 ಮಿಲಿಯನ್ ಡಾಲರ್ ದಾಟಲಿದೆ.




Leave a Reply

Your email address will not be published. Required fields are marked *

error: Content is protected !!