160 ಭಾಷೆಗಳಲ್ಲಿ ಅವತಾರ್-2

239

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಅವತಾರ್ ಸಿನಿಮಾ ಯಾರು ನೋಡಿಲ್ಲ. ವಿಶ್ವದ ಬಹುತೇಕ ಮಂದಿ ಹತ್ತಾರು ಬಾರಿ ನೋಡಿದ ಸಿನಿಮಾ ಅವತಾರ್. ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಚಿತ್ರ 2009ರಲ್ಲಿ ರಿಲೀಸ್ ಆಗಿ, ಬರೋಬ್ಬರಿ 21 ಸಾವಿರ ಕೋಟಿ ಗಳಿಕೆ ಮಾಡಿದೆ. ಇದೀಗ ಅವತಾರ್-2 ಬಿಡುಗಡೆಗೆ ಸಿದ್ಧವಾಗಿದೆ.

ಯೆಸ್, ಅವತಾರ್: ದಿ ವೇ ಆಫ್ ವಾಟರ್ ಹೆಸರಿನ ಮೂಲಕ ರಿಲೀಸ್ ಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 16 ರಂದು ಬರೋಬ್ಬರಿ 160 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಮ್ಯಾಮೆರಾನ್ ಹೇಳಿದ್ದಾರೆ.

ಈ ಚಿತ್ರಕ್ಕೆ ಜಾನ್ ಲ್ಯಾನ್ ಡೌ ಹಣ ಹೂಡಿಕೆ ಮಾಡಿದ್ದಾರೆ. ಸ್ಟೇಫನ್ ಲ್ಯಾಂಗ್, ಜೋಲ್ ಡೇವಿಡ್ ಮೂರ್, ಸಿಗೌರ್ನಿ ವೀವರ್, ಕ್ಲಿಫ್ ಕರ್ಟೀಸ್, ಎಡೀ ಫಾಲ್ಕೋ, ಸಿಸಿಎಚ್ ಪೌಂಡರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಅವತಾರ್ ಚಿತ್ರ 5 ಸರಣಿಗಳಲ್ಲಿ ಮೂಡಿ ಬರಲಿದೆ.




Leave a Reply

Your email address will not be published. Required fields are marked *

error: Content is protected !!