ಅವತಾರ ಪುರುಷನ ದರ್ಶನಕ್ಕೆ ಡೇಟ್ ಫಿಕ್ಸ್

506

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೋವಿಡ್ ಲಾಕ್ ಡೌನ್ ನಿಂದಾಗಿ ಸಾಕಷ್ಟು ಸಿನಿಮಾಗಳು ಬಿಡುಗಡೆ ದಿನಾಂಕ ಮುಂದೂಡುತ್ತಾ ಬಂದವು. ಇದೀಗ ಮಾರ್ಚ್ 17ಕ್ಕೆ ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್ ತೆರೆ ಕಾಣುತ್ತಿದೆ. ಇದಾದ ನಂತರ ಏಪ್ರಿಲ್ 14ಕ್ಕೆ ಕೆಜಿಎಫ್-2 ಬರುತ್ತಿದೆ.

ಕೆಜಿಎಫ್ ಬಳಿಕ ಎರಡು ಬಾರಿ ಮುಂದೂಡುತ್ತಾ ಬಂದಿರುವ ಶರಣ್ ನಟನೆಯ ಅವತಾರ ಪುರುಷ ಚಿತ್ರ ತೆರೆಗೆ ಬರುತ್ತಿದೆ. ಮೇ 6ರಂದು ಸಿನಿಮಾ ರಿಲೀಸ್ ಮಾಡಲಾಗುವುದು ಚಿತ್ರತಂಡ ತಿಳಿಸಿದೆ. ಅಲ್ದೇ ಈ ಚಿತ್ರ ಸಹ ಎರಡು ಭಾಗದಲ್ಲಿ ಬರುತ್ತಿದೆ. ಮೊದಲ ಭಾಗ ರಿಲೀಸ್ ಮೂರು ತಿಂಗಳಲ್ಲಿ ಎರಡನೇ ಭಾಗ ಬರಲಿದೆಯಂತೆ.

ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಶರಣಗೆ ಜೋಡಿಗೆ ನಟಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ನಟ ಶ್ರೀನಗರ ಕಿಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!