ಐ ಆಮ್ ರೂಡ್ ಎನ್ನುತ್ತಿರುವ ಯಂಗ್ ರೆಬಲ್ ಸ್ಟಾರ್

144

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ಸುಕ್ಕಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ನಟ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹುಟ್ಟು ಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಗಿದೆ.

ಸೂರಿ ನಿರ್ದೇಶನದ ಚಿತ್ರವೆಂದರೆ ಅದು ಕಂಪ್ಲೀಟ್ ಮಾಸ್ ಮೂವಿ. ಅವರ ಹಿಂದಿನ ಚಿತ್ರಗಳಂತೆ ಇಲ್ಲಿಯೂ ಅದು ಮುಂದುವರೆದಿದೆ. ಟೀಸರ್ ನಲ್ಲಿ ಹೀರೋನ ಬಿಟ್ಟರೆ ಮತ್ಯಾವ ದೊಡ್ಡ ನಟರು ಆಗಿರಲಿ, ನಟಿಯಾಗಲಿ ಎಂಟ್ರಿ ಇಲ್ಲ. ಓನ್ಲಿ ಅಭಿಯ ಸೀನ್ ಗಳಿವೆ. ನನ್ನ ಹೆಸರು ರುದ್ರ ನಾನು ಬೈ ಬರ್ಥ್ ರೂಡ್ ಅನ್ನೋ ಡೈಲಾಗ್ ಮೂಲಕ ರಗಡ್ ಎಂಟ್ರಿಯಿದೆ.

ಚರಣ್ ಮ್ಯೂಸಿಕ್ ಇದೆ. ಮಾಸ್ತಿ ಡೈಲಾಗ್ ಬರೆದಿದ್ದಾರೆ. ಸ್ಟುಡಿಯೋ 18 ಮೂಲಕ ಸುಧೀರ್ ಕೆ.ಎಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!