5 ಭಾಷೆಗಳಲ್ಲಿ ಬಿಡುಗಡೆಯಾದ ಬನಾರಸ್

188

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿರುವ ಝೈದ್ ಖಾನ್ ಹಾಗೂ ಸೋನಲ್ ಮೊಂತರೋ ನಟಿಸಿರುವ ಬನಾರಸ್ ಚಿತ್ರ ಇಂದು 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಮೊದಲ ಚಿತ್ರವಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಕರ್ನಾಟಕಕ್ಕಿಂತ ಬೇರೆ ಭಾಷೆಗಳಲ್ಲಿಯೇ ಹೆಚ್ಚು ಸ್ಕ್ರೀನ್ ಬನಾರಸ್ ಚಿತ್ರಕ್ಕೆ ಸಿಕ್ಕಿವೆ. ಕರ್ನಾಟಕದಲ್ಲಿ 125 ಸಿಂಗಲ್ ಸ್ಕ್ರೀನ್ ಹಾಗೂ 50 ಮಲ್ಟಿಫ್ಲೆಕ್ಸ್ ಸಿಕ್ಕಿವೆ. ಹಿಂದಿಯಲ್ಲಿ 500, ತೆಲುಗು 300, ತಮಿಳು 250 ಹಾಗೂ ಕೇರಳದಲ್ಲಿ 120 ಸ್ಕ್ರೀನ್ ಗಳು ಸಿಕ್ಕಿವೆ. ಈ ಮೂಲಕ ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬನಾರಸ್ ಎಂಟ್ರಿಯಾಗಿದೆ.

ಬನಾರಸ್ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ನಡೆದಿದೆ. ಈಗಾಗಲೇ ಹಾಡುಗಳು ಜನರನ್ನು ಸೆಳೆದಿದ್ದು, ಮೊದಲ ದಿನ ಚಿತ್ರ ನೋಡಿದವರು ಏನು ಹೇಳುತ್ತಾರೆ ಅನ್ನೋದು ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!