ಆ ಒಂದು ತಪ್ಪಿನಿಂದ 40 ಗ್ರಾಹಕರು ಲಕ್ಷಾಂತರ ರೂಪಾಯಿ ಕಳೆದುಕೊಂಡರು

135

ಪ್ರಜಾಸ್ತ್ರ ಸುದ್ದಿ

ಮುಂಬೈ: ಇವತ್ತಿನ ಡಿಜಿಟಲ್ ಲೋಕದಲ್ಲಿ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಮೋಸ ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಲೇ ಇದ್ದಾರೆ. ಇದಕ್ಕೆ ತಾಜಾ ಉದಾಹರಣೆ, ಮುಂಬೈನಲ್ಲಿ ಬರೋಬ್ಬರಿ 40 ಗ್ರಾಹಕರು ಹಣ ಕಳೆದುಕೊಂಡಿದ್ದಾರೆ.

ಬ್ಯಾಂಕ್ ತನ್ನ ಗ್ರಾಹಕರನ್ನು ಗುರುತಿಸುವ ಸಲುವಾಗಿ ಕೆವೈಸಿ ಕಡ್ಡಾಯ ಮಾಡಿದೆ. ಇದೆ ರೀತಿಯ ಬೇರೆ ಬೇರೆ ಪ್ಲಾನ್ ಮಾಡಿ ಆನ್ಲೈನ್ ಮೂಲಕ ಹಣ ವಂಚನೆ ಮಾಡಲಾಗುತ್ತಿದೆ. ಬ್ಯಾಂಕ್ ವೊಂದರ ಸಂದೇಶ ಬಂದಿದೆ. ಕಸ್ಟಮರ್ ಐಡಿ, ಪಾಸ್ ವರ್ಡ್, ಒಟಿಪಿ ಅಪ್ ಡೇಟ್ ಮಾಡುತ್ತಿರುವುದಾಗಿ ತಿಳಿಸಿದೆ. ಇದನ್ನು ನಂಬಿದ ಗ್ರಾಹಕರು ಕೆವೈಸಿ ಹೇಳಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇದರಲ್ಲಿ ಕಿರುತರೆ ನಟಿ ಶ್ವೇತಾ ಮೆನನ್ ಸಹ ಹಣ ಕಳೆದುಕೊಂಡಿದ್ದಾರೆ.

ಮೊಬೈಲ್ ಗೆ ಬಂದ ಮೆಸೇಜ್ ನಂಬಿ ಒಂದೇ ಒಂದು ಕ್ಲಿಕ್ ಮಾಡಿದ ಪರಿಣಾಮ 3 ದಿನಗಳಲ್ಲಿ ಬೇರೆ ಬೇರೆ ಬ್ಯಾಂಕ್ ಗಳ 40 ಗ್ರಾಹಕರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ನಕಲಿ ಸಂದೇಶಗಳನ್ನು ನಂಬಿ ಜನರು ಮೋಸ ಹೋಗಬಾರದೆಂದು ಪೊಲೀಸರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!