ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್

150

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಹೃಷಿಕೇಶ್ ಕಾನಿಟ್ಕರ್ ಅವರನ್ನು ಕೋಚ್ ಆಗಿ ಮಂಗಳವಾರ ನೇಮಕ ಮಾಡಲಾಗಿದೆ. ಮಾಜಿ ಮುಖ್ಯ ತರಬೇತುದಾರ ರಮೇಶ್ ಪವಾರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಸೇರಲಿದ್ದಾರೆ.

ಬಿಸಿಸಿಐನ ಪನರ್ ರಚನೆಯ ಭಾಗವಾಗಿ ಪುರುಷರ ತಂಡಕ್ಕೆ ಬರಲಿದ್ದಾರೆ. ಡಿಸೆಂಬರ್ 9ರಿಂದ ಮುಂಬೈನಲ್ಲಿ ಶುರುವಾಗಲಿರುವ 5 ಟಿ-20 ಸರಣಿಯ ವೇಳೆಗೆ ಹೃಷಿಕೇಶ್ ಕಾನಿಟ್ಕರ್ ತಂಡ ಸೇರಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನೂತನ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿರುವುದು ಖುಷಿಯ ಸಂಗತಿ. ಈ ತಂಡ ಮುಂದಿರುವ ಸವಾಲಿಗೆ ಸಿದ್ಧವಾಗಿದೆ ಎಂದು ನಂಬುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!