ಪುರುಷ-ಮಹಿಳಾ ಕ್ರಿಕೆಟ್ ಆಟಗಾರರಿಗೆ ಇನ್ನು ಒಂದೇ ರೀತಿ ವೇತನ

220

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಕ್ರಿಕೆಟ್ ಅಂಗಳದಲ್ಲಿ ಪುರುಷ ಹಾಗೂ ಮಹಿಳೆಯರನ್ನು ಒಂದೇ ರೀತಿ ನೋಡುತ್ತಿಲ್ಲವೆಂದು ಹೇಳಿಕೊಂಡು ಬರಲಾಗುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಒಂದೇ ರೀತಿಯ ವೇತನವಿಲ್ಲ. ಅದೇ ರೀತಿ ಕ್ರಿಕೆಟ್ ನಲ್ಲಿಯೂ ಇತ್ತು. ಇನ್ನು ಮುಂದೆ ಪುರುಷ ಹಾಗೂ ಮಹಿಳಾ ಕ್ರಿಕೆಟ್ ಆಟಗಾರರಿಗೆ ಒಂದೇ ರೀತಿಯ ನೀಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.

ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಟೆಸ್ಟ್ ಪಂದ್ಯ(15 ಲಕ್ಷ), ಏಕದಿನ(6 ಲಕ್ಷ) ಹಾಗೂ ಟಿ-20(3 ಲಕ್ಷ) ನೀಡಲಾಗುತ್ತಿದೆ. ಈ ರೀತಿಯ ವೇತನ ಇನ್ನು ಮುಂದೆ ಪುರುಷ ಹಾಗೂ ಮಹಿಳಾ ಕ್ರಿಕೆಟ್ ಆಟಗಾರರಿಗೆ ಅನ್ವಯವಾಗಲಿದೆ. ಇದಕ್ಕೆ ಬೆಂಬಲ ನೀಡಿದ ಮಂಡಳಿಯ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!