ಸಿಂದಗಿಯಲ್ಲಿ ಬೇಸಿಗೆ ಕಲಾ ಮೇಳ-2023

76

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಸಿಂದಗಿಯಲ್ಲಿ 2ನೇ ವರ್ಷದ ‘ಬೇಸಿಗೆ ಕಲಾ ಮೇಳ-2023’ ಆಯೋಜಿಸಲಾಗಿದೆ. ಏಪ್ರಿಲ್ 2ರಿಂದ 30ರ ತನಕ ಪಟ್ಟಣದ ಗುರುದೇವ ಆಶ್ರಮದ ಆವರಣದಲ್ಲಿ ಶಿಬಿರ ನಡೆಯಲಿದೆ. ನಾಡಿನ ಖ್ಯಾತ ಕಲಾವಿದರು ಶಿಬಿರ ನಡೆಸಿಕೊಡಲಿದ್ದಾರೆ. ಸಂಜೆ 4 ಗಂಟೆಯಿಂದ 7 ಗಂಟೆಯ ತನಕ ಶಿಬಿರ ನಡೆಯಲಿದೆ.

ರಂಗಭೂಮಿ ಚಟುವಟಿಕೆ, ರೂಪಕ, ರಂಗಗೀತೆ, ಭಾವಗೀತೆ, ಪರಿಸರ ಗೀತೆ, ಜಾನಪದ ಗೀತೆ, ಡ್ಯಾನ್ಸ್, ದೇಸಿ ಕಲಾ ಪ್ರಕಾರಗಳು ಸೇರಿದಂತೆ ಸೃಜನಶೀಲ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತೆ. 6 ವರ್ಷದಿಂದ 14 ವರ್ಷದವರೆಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ಈ ನಂಬರ್ ಗೆ (8970910323) ಸಂಪರ್ಕಿಸಲು ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ತಿಳಿಸಿದ್ದಾರೆ.
Leave a Reply

Your email address will not be published. Required fields are marked *

error: Content is protected !!