ಪ್ರವಾಸಿಗರ ನೆಚ್ಚಿನ ಬ್ಲೂ ಸಿಟಿ

333

ಪ್ರಜಾಸ್ತ್ರ ಸುದ್ದಿ

ಜೋಧ್ಪುರ್: ದೇಶದಲ್ಲಿ ಸಾಕಷ್ಟು ಸಂದರ ತಾಣಗಳಿವೆ. ಒಂದಕ್ಕಿಂತ ಒಂದು ಭಿನ್ನ ವಿಭಿನ್ನವಾಗಿವೆ. ಅವುಗಳಲ್ಲಿ ಬ್ಲೂ ಸಿಟಿ ಸಹ ಒಂದು. ಸನ್ ಸಿಟಿ ಅಂತಾನೂ ಫೇಮಸ್ ಆಗಿರುವ ನಗರ ಇರುವುದು ರಾಜಸ್ಥಾನದಲ್ಲಿ.

ರಾಜಸ್ಥಾನ ಹೇಳಿ ಕೇಳಿ ಸುಂದರ ಅರಮನೆಗಳ ನಗರ. ಮರಭೂಮಿಯಲ್ಲಿ ಅರಳಿ ನಿಂತಿರುವ ಅಧ್ಬುತ ತಾಣ. ಅದರಲ್ಲೂ ಜೋಧ್ಪುರ್ ನಗರ ನೀಲಿಮಯ. ಇಲ್ಲಿನ ಮನೆಗಳು, ದೇವಾಲಯಗಳು, ಅಂಗಡಿಗಳು ಸೇರಿದಂತೆ ಎಲ್ಲಿ ನೋಡಿದ್ರೂ ನೀಲಿ ಬಣ್ಣ. ಹೀಗಾಗಿ ಈ ನಗರವನ್ನ ಬ್ಲೂ ಸಿಟಿ ಎಂದು ಕರೆಯಲಾಗುತ್ತೆ.

ರಾಜಸ್ಥಾನದ ಎರಡನೇ ಅತೀ ದೊಡ್ಡ ನಗರವಾಗಿರುವ ಜೋಧ್ಪುರ್, ಥಾರ್ ಮರಭೂಮಿಯಿಂದಾಗಿಯೂ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತೆ. ಹೀಗಾಗಿ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ದಿ ಡಾರ್ಕ್ ನೈಟ್ ರೈಸಸ್ ಚಿತ್ರದಲ್ಲಿ ಈ ನಗರದ ಅದ್ಭುತ ದೃಶ್ಯ ಕಾವ್ಯ ಇದೆ.




Leave a Reply

Your email address will not be published. Required fields are marked *

error: Content is protected !!