ಬ್ರಹ್ಮಾಸ್ತ್ರ ಸಕ್ಸಸ್ ಬಗ್ಗೆ ಕರಣ್ ಟ್ವೀಟ್

324

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದ ಸ್ಟಾರ್ ನಟರ ಸಾಲು ಸಾಲು ಚಿತ್ರಗಳಿಗೆ ಬಾಯ್ ಕಟ್ ಬಿಸಿ ತಟ್ಟಿತು. ಅದೇ ರೀತಿ ನಟ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್ ಚಿತ್ರಕ್ಕೂ ಬಾಯ್ ಕಟ್ ಹೇಳಲಾಯಿತು. ಇದರ ನಡುವೆಯೂ ಚಿತ್ರ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.

ಬ್ರಹ್ಮಾಸ್ತ್ರ ಪಾರ್ಟ್ ಒನ್: ಶಿವ ವಿಶ್ವದಾದ್ಯಂತ 75 ಕೋಟಿ ರೂಪಾಯಿಯನ್ನು ಮೊದಲ ದಿನ ಗಳಿಕೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಗೆಲುವಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಮೊದಲ ದಿನದ ಕಲೆಕ್ಷನ್ 75 ಕೋಟಿ ಆಗಿರುವುದರಿಂದ ಇನ್ನು ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಇದರೊಂದಿಗೆ ಅನಾವಶ್ಯಕವಾಗಿ ಬಾಯ್ ಕಟ್ ಹೇಳುತ್ತಿದ್ದವರಿಗೆ ತಿರುಗೇಟು ನೀಡಿದಂತೆ ಆಗಲಿದೆ.

ಚಿತ್ರದ ಬಗ್ಗೆ ವಿಮರ್ಶಕರಿಂದ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲಿಯಾಳಂ ಭಾಷೆಯಲ್ಲೂ ಸಿನಿಮಾ ರಿಲೀಸ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!