9 ಮಡದಿಯರ ಮುದ್ದಿನ ಗಂಡನ ಕಥೆ

290

ಪ್ರಜಾಸ್ತ್ರ ಲೈಫ್ ಸ್ಟೈಲ್

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮದುವೆ ಅಂದರೆ ಏಕ ಪತಿ, ಪತ್ನಿ ಅನ್ನೋದು ಇದೆ. ಕೆಲವು ಧಾರ್ಮಿಕ, ಸಮುದಾಯಗಳಲ್ಲಿ ಬಹುಪತ್ನಿತ್ವ, ಬಹುಪತಿತ್ವ ಇದೆ. ಆದರೆ, ಬಹುಪತ್ನಿತ್ವಕ್ಕೆ ಅವಕಾಶವಿಲ್ಲದ ಬ್ರೆಜಿಲ್ ನಲ್ಲಿ ಮಾಡೆಲ್ ವೊಬ್ಬ ಬರೋಬ್ಬರಿ 9 ಮಂದಿಯನ್ನು ಮದುವೆಯಾಗಿದ್ದಾನೆ.

ಸಾವೋಪೌಲೋದ ಅರ್ಥರ್ ಓ ಊರ್ಸೊ ಅನ್ನೋ ಮಾಡೆಲ್ 9 ಮಂದಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾನೆ. ಪ್ರೀತಿ ಯಾವಾಗಲೂ ಮುಕ್ತವಾಗಿರಬೇಕು ಅನ್ನೋ ನಂಬಿಕೆ ಹೊಂದಿರುವ ಊರ್ಸೊ 9 ಮಡದಿಯರ ಗಂಡ. ಇದರಲ್ಲಿ ಒಬ್ಬಳು ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ. ಇದರಿಂದ ಅವನಿಗೆ ಬೇಸರವಾಗಿದೆಯಂತೆ.

ಲುವಾನಾ ಕಜಾಕಿ ಅನ್ನೋ ಮೊದಲು ಮದುವೆಯಾಗಿದ್ದಾನೆ. ಮುಕ್ತ ಪ್ರೀತಿ ಹಾಗೂ ಏಕಪತ್ನಿ ಪದ್ಧತಿ ವಿರುದ್ಧ ಕಳೆದ ವರ್ಷ 8 ಮಂದಿಯನ್ನು ಮದುವೆಯಾಗಿದ್ದ. ಇದರಲ್ಲಿ ಅಗಾತಾ ಅನ್ನೋ ಪತ್ನಿ ವಿಚ್ಛೇದನ ಕೇಳಿದ್ದಾಳೆ. ಇತರೆ ಪತ್ನಿಯರೊಂದಿಗೆ ಗಂಡನನ್ನು ಹಂಚಿಕೊಳ್ಳಲು ಇಷ್ಟಪಡದ ಅಗಾತಾ ಈ ನಿರ್ಧಾರಕ್ಕೆ ಬಂದಿದ್ದಾಳೆ. ಇದಕ್ಕೆ ಊರ್ಸೊ ಬೇಸರವಾಗಿದೆ ಎಂದಿದ್ದಾನೆ. ಆದರೆ, ಆ ಸ್ಥಾನವನ್ನು ಮತ್ತೊಬ್ಬರು ತುಂಬುತ್ತಾರೆ ಎನ್ನುತ್ತಾನೆ ಭೂಪ.

ಹೀಗೆ 9 ಮಂದಿಯನ್ನು ಊರ್ಸೊ ಮದುವೆಯಾಗಿದ್ದರೂ ಬ್ರೆಜಿಲ್ ಕಾನೂನು ಪ್ರಕಾರ ಸಿಂಧುತ್ವ ಪಡೆಯಲ್ಲ. ಇಲ್ಲಿನ ಕಾನೂನು ಪ್ರಕಾರ ಬಹುಪತ್ನಿತ್ವಕ್ಕೆ ಮಾನ್ಯತೆಯಿಲ್ಲ. ಆದರೆ, ಮದುವೆಯಾಗಿ ಒಟ್ಟಿಗೆ ಇರಲು ಯುವತಿಯರೆ ಒಪ್ಪಿದರೆ ಯಾರೂ ಏನು ಮಾಡಲು ಸಾಧ್ಯವಿಲ್ಲ.




Leave a Reply

Your email address will not be published. Required fields are marked *

error: Content is protected !!