ದ್ವೇಷದ ಟ್ವೀಟ್ ಗಳಿಗೆ ಇನ್ಮುಂದೆ ಬ್ರೇಕ್!

202

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಟ್ವಿಟ್ಟರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಎಲಾನ್ ಮಸ್ಕ್ ಒಂದೊಂದೇ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಬರೆಯುವ ಪದಗಳ ಮಿತಿ ಹೆಚ್ಚಿಸಿದರು. ಬ್ಲೂ ಟಿಕ್ ಬೇಕಾದರೆ 8 ಡಾಲರ್ ಪಾವತಿಸಬೇಕು ಎಂದರು. ಉದ್ಯೋಗಿಗಳು ಸಂಸ್ಥೆಯಲ್ಲಿಯೇ ಕೆಲಸ ಮಾಡಬೇಕು. ದಿನದ 8 ಗಂಟೆ ಕೆಲಸ ಕಡ್ಡಾಯ ಮಾಡಿದರು.

ಹೀಗಾಗಿ ಟ್ವಿಟ್ಟರ್ ಸಂಸ್ಥೆಯಲ್ಲಿ ಸಾಮೂಹಿಕ ರಾಜೀನಾಮೆ ನಡೆದಿದೆ. ಇದರ ನಡುವೆ ಮಸ್ಕ್, ಇನ್ನು ಮುಂದೆ ಟ್ವಟ್ಟರ್ ನಲ್ಲಿ ದ್ವೇಷದ ಪೋಸ್ಟ್ ಗಳಿಗೆ ಅವಕಾಶವಿಲ್ಲ ಎಂದಿದ್ದಾರೆ. ದ್ವೇಷದ ಟ್ವೀಟ್ ಗಳನ್ನು ಡಿಬೂಸ್ಟ್, ಡಿಮಾನಿಟೈಸ್ ಮಾಡಲಾಗುತ್ತದೆ. ನಿರ್ದಿಷ್ಟವಾಗಿ ಬಳಕೆದಾರರು ಹುಡುಕುವ ತನಕ ಅದು ಸಿಗುವುದಿಲ್ಲ. ಈ ಮೂಲಕ ಮಾತನಾಡುವ ಸ್ವಾತಂತ್ರ್ಯವಿದೆ. ಅದನ್ನು ತಲುಪಿಸುವುದಿಲ್ಲ ಎಂದಿದ್ದಾರೆ.

ಈ ಹೊಸ ನಿಯಮ ವೈಯಕ್ತಿಕ ಖಾತೆಗಳನ್ನು ಅನ್ವಯಿಸುತ್ತದೆ ಹೊರತು ಸಂಸ್ಥೆಗೆ ಅಲ್ಲ ಎಂದಿದ್ದಾರೆ. ಈ ನಿಯಮದಿಂದ ದ್ವೇಷ ಹರಡುವ ಟ್ವೀಟ್ ಗಳು ಕಡಿಮೆಯಾಗುತ್ತವೆಯಾ ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!