ಮದ್ಯ, ಡ್ರಗ್ಸ್, ಗನ್ ವೈಭವೀಕರಿಸುವ ಹಾಡುಗಳಿಗೆ ಕೇಂದ್ರದಿಂದ ಬ್ರೇಕ್

267

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯುವ ಜನತೆ ಬಹುಬೇಗ ಆಕರ್ಷಣೆಯಾಗುವುದು ಕೆಟ್ಟ ಚಟಗಳಿಗೆ. ಅದರಿಂದ ದೂರ ಇಡಬೇಕಾದ ಸಂದರ್ಭದಲ್ಲಿಯೇ ಅದನ್ನೇ ವೈಭವೀಕರಿಸುವ ಹಾಡುಗಳು ಹೆಚ್ಚಾಗಿ ಬರುತ್ತಿವೆ. ಇನ್ನು ಮುಂದೆ ಇಂತಹ ಹಾಡುಗಳನ್ನು ಪ್ಲೇ ಮಾಡಬೇಡಿ ಎಂದು ಕೇಂದ್ರ ಸರ್ಕಾರ ಎಫ್ಎಂ ಕೇಂದ್ರಗಳಿಗೆ ಎಚ್ಚರಿಕೆ ನೀಡಿದೆ.

ಕೆಲವು ಎಫ್ಎಂ ಚಾನಲ್ ಗಳು ಮದ್ಯ, ಡ್ರಗ್ಸ್, ದರೋಡೆಕೋರುತನ ಸೇರಿದಂತೆ ಬಂದೂಕು ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ. ಹೀಗಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಖಡಕ್ ಎಚ್ಚರಿಕೆ ನೀಡಿದೆ.

ರೇಡಿಯೋ ಚಾನೆಲ್‌ಗಳಿಗೆ ನೀಡಿದ ಸಲಹೆಯಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅನುಮತಿ ಒಪ್ಪಂದ (GOPA) ಮತ್ತು ಅನುಮತಿ ಒಪ್ಪಂದದ ವಲಸೆ ಅನುದಾನ (MGOPA) ನಲ್ಲಿ ಸೂಚಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಯಾವುದೇ ವಿಷಯ ಉಲ್ಲಂಘಿಸದಂತೆ ಪ್ರಸಾರ ಮಾಡಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದೆ. ಇನ್ನು ರ್ಯಾಪ್ ಸಾಂಗ್ಸ್ ಹೆಸರಿನಲ್ಲಿ ಕೆಟ್ಟ ಕೆಟ್ಟ ಪದ ಬಳಕೆ ಮೂಲಕ ಯುವಕರ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಇದಕ್ಕೂ ಕಡಿವಾಣ ಹಾಕಬೇಕು ಅನ್ನೋ ಕೂಗು ಕೇಳಿ ಬರುತ್ತಿದೆ.
Leave a Reply

Your email address will not be published. Required fields are marked *

error: Content is protected !!